ಬೆಂಗಳೂರು : ವಿವಿಧ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕ್ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಹಾಗೂ ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ವೇತನ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಸಂಭಾವನೆಗೆ ಅಗತ್ಯವಿರುವ ಅನುದಾನವನ್ನು ಪ್ರಧಾನ ಲೆಕ್ಕ ಶೀರ್ಷಿಕೆ 2515ರಡಿ ಒಟ್ಟುರೂ.1758.56ಲಕ್ಷಗಳನ್ನು ಬಿಡುಗಡೆಗೊಳಿಸಲು ಪ್ರಸ್ತಾಪಿಸಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದಡಿ ಎರಡನೇ ಕಂತಿನ ಅನುದಾನ ರೂ.830,63ಲಕ್ಷಗಳನ್ನು ಲೆಕ್ಕ ಶೀರ್ಷಿಕೆ:2515-00-1961-05-300ರಿಂದ ಮತ್ತು ತಾಲ್ಲೂಕ ಪಂಚಾಯತ್ ಕಾರ್ಯಕ್ರಮದಡಿ ರೂ.927,93ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 2515-00-197-1-10-300ರಿಂದ ಬಿಡುಗಡೆಗೊಳಿಸಲು ನಿರ್ಣಯಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯಕ್ರಮದಡಿ ದಿನಗೂಲಿ ನೌಕರರ ವೇತನ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳ ಸಂಭಾವನೆಗೆ ಪಾವತಿಗಾಗಿ ಅಗತ್ಯವಿರುವ ಎರಡನೇ ಅನುದಾನ ರೂ.830.63ಲಕ್ಷಗಳನ್ನು ಲೆಕ್ಕ Brado:2515-00-196-1-05-300 do.927.93gne de Bear 8:2515-00-197-1- 10-300 .ಹೀಗೆ ಒಟ್ಟಾರೆ ರೂ.1758.5h(ರೂಪಾಯಿ ಒಂದು ಸಾವಿರದ ಏಳುನೂರಾ ಐವತ್ತೆಂಟು ಲಕ್ಷ ಐವತ್ತಾರು ಸಾವಿರಗಳು ಗಳು ಮಾತ್ರಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
