alex Certify ಮೀನುಗಾರರಿಗೆ ಗುಡ್ ನ್ಯೂಸ್ : ಸಹಾಯಧನಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರಿಗೆ ಗುಡ್ ನ್ಯೂಸ್ : ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

2023-24ನೇ ಸಾಲಿನ ಯೋಜನೆಗಳಾದ ಉತ್ಪಾದನೆ ಮತ್ತು ಉತ್ಪಾದಕತೆಯ ವರ್ಧನೆಗೆ ಸಂಬಂಧಿಸಿದ ಯೋಜನೆಗಳು ಮೀನು ಕೃಷಿ ಕೊಳಗಳ ನಿರ್ಮಾಣ ಹೂಡಿಕೆ ವೆಚ್ಚದೊಂದಿಗೆ, ಒಳನಾಡಿನಲ್ಲಿ ಬಯೋಪ್ಲೋಕ್ ಕೊಳಗಳ ನಿರ್ಮಾಣ(ಹೆಕ್ಟೇರ್ 14 ಲಕ್ಷ ರೂ ಹೂಡಿಕೆ ವೆಚ್ಚ ಸೇರಿದಂತೆ), ಜೀವಂತ ಮೀನು ಮಾರಾಟ ಕೇಂದ್ರಗಳು, ಸಣ್ಣ ಆರ್ಎಎಸ್ (100 ಮೀ. 31 ಟ್ಯಾಂಕ್ ಬಯೋಪ್ಲೋಕ್ (4 ಮೀ ಡಯಾ 1.5 ಮೀ ಎತ್ತರದ 7 ಟ್ಯಾಂಕ್ಗಳು) ಘಟಕವನ್ನು ಸ್ಥಾಪಿಸುವುದು, ಯಾಂತ್ರಿಕೃತ ಎಫ್ಆರ್ಪಿ ಬೋಟ್. ಈ ಯೋಜನೆಗಳಿಗೆ ರೈತರು ಅರ್ಜಿ ಸಲ್ಲಿಸಲು ಆಗಸ್ಟ್, 22 ಕೊನೆಯ ದಿನವಾಗಿದೆ. ಜಿಲ್ಲೆಯ ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿದೆ.

ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಮಡಿಕೇರಿ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...