alex Certify ಮೀನುಗಾರರಿಗೆ ಗುಡ್ ನ್ಯೂಸ್ : ಮತ್ಸ್ಯವಾಹಿನಿ ವಾಹನಗಳಿಗಾಗಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರರಿಗೆ ಗುಡ್ ನ್ಯೂಸ್ : ಮತ್ಸ್ಯವಾಹಿನಿ ವಾಹನಗಳಿಗಾಗಿ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಧಾನಿ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಪರಿಸರ ಸ್ನೇಹಿ ಕಿಯೋಸ್ಕ್ ಮತ್ಸ್ಯ ವಾಹಿನಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮತ್ಸ್ಯವಾಹಿನಿ ವಾಹನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಮಾ.16ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಬಳ್ಳಾರಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

*ಯೋಜನೆಗೆ ಯಾರು ಅರ್ಹರು?

ಮೀನು ಮಾರಾಟಗಾರರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಪ್ರಾಂಚೈಸಿಗಳು, ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ಪಡೆದವರು, ಮೀನುಗಾರರ ಉತ್ಪಾದಕ ಸಂಸ್ಥೆಗಳು, ಮೀನುಗಾರಿಕೆ ಸಹಕಾರ ಸಂಘಗಳು, ಮಹಿಳಾ ಸ್ವಸಹಾಯ ಗುಂಪುಗಳು, ನಿರುದ್ಯೋಗಿ ಯುವಕ-ಯುವತಿಯರು ಅರ್ಹರಾಗಿರುತ್ತಾರೆ.

ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಫಲಾನುಭವಿಗಳಿಂದ ಮಾಹೆಯಾನ ರೂ.3000 ಶುಲ್ಕದಂತೆ ಪರವಾನಗಿ ಮುಖಾಂತರ ಮತ್ಸ್ಯವಾಹಿನಿ ವಾಹನಗಳನ್ನು ನೀಡಲಾಗುತ್ತದೆ.ಅರ್ಜಿದಾರರು ಸಾಮಾನ್ಯ ವರ್ಗ ರೂ.1 ಲಕ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ವರ್ಗದವರು ರೂ.50 ಸಾವಿರ ಪ್ರಾರಂಭಿಕ ಭದ್ರತಾ ಠೇವಣಿ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಮೊ.8970754167, ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಮೊ.9620177588, ಬಳ್ಳಾರಿ ಮೀನುಗಾರಿಕೆ ಉಪ ನಿರ್ದೇಶಕರ ಮೊ.9449593156 ಗೆ ಸಂರ್ಪಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...