ನವದೆಹಲಿ : ರೈತ ಸಮುದಾಯಕ್ಕೆ ಹವಾಮಾನ ಇಲಾಖೆ ನೆಮ್ಮದಿಯ ಸುದ್ದಿ ನೀಡಿದ್ದು, ಜೂನ್ ತಿಂಗಳ ಮಳೆ ಕೊರತೆಯನ್ನು ಜುಲೈ ತಿಂಗಳಲ್ಲಿ ನೀಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದಲ್ಲಿ ಜೂನ್ ನಲ್ಲಿ ಶೇ. 9 ರಷ್ಟು ಇದ್ದ ಮುಂಗಾರು ಮಳೆ ಕೊರತೆಯನ್ನು ಜುಲೈನಲ್ಲಿ ಸುರಿದ ಭಾರೀ ಮಳೆ ನೀಗಿದ್ದು, ದೇಶದಲ್ಲಿ ಈಗ ಶೇ. 13 ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಮಳೆ ಈ ಬಾರಿ ವಿಳಂಬವಾಗಿ ಪ್ರವೇಶಿಸಿದ್ದು, ಜೂನ್ ತಿಂಗಳಲ್ಲಿ ಶೇ. 9 ರಷ್ಟು ಮಳೆ ಕೊರತೆಯಾಗಿತ್ತು. ಆದರೆ ಜುಲೈ ನಲ್ಲಿ ಶೇ. 13 ರಷ್ಟು ಹೆಚ್ಚು ಮಳೆಯಾಗಿದ್ದು, ಜೂನ್- ಜುಲೈನಲ್ಲಿ ಸುರಿಯಬೇಕಿದ್ದ 444.5 ಮಿ.ಮೀ ಬದಲಿಗೆ 467 ಮಿ.ಮೀನಷ್ಟು ಮಳೆಯಾಗಿದೆ. ಜೊತೆಗೆ ಮುಂದಿನ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲೂ ಸಾಮಾನ್ಯ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.