ಬೆಂಗಳೂರು: ಮುಂಗಾರು ವಿಳಂಬದಿಂದಾಗಿ ಬರದ ಆತಂಕದಲ್ಲಿದ್ದ ರೈತರಿಗೆ ಇದೀಗ ನೆಮ್ಮದಿ ಸಿಕ್ಕಿದ್ದು, ರಾಜ್ಯಾದ್ಯಂತ ಮಳೆಯ ಅಬ್ಬರ ಶುರುವಾಗಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಿದೆ.
ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮಳೆ ಆಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ಮಳೆ ಬಿರುಸುಗೊಳ್ಳದೇ ಆತಂಕಗೊಂಡಿದ್ದ ರೈತರಿಗೆ ಇದೀಗ ವರುಣ ಕೃಪೆ ತೋರಿದ್ದು, ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ.
ಜೂನ್ ನಲ್ಲಿ ತೀವ್ರ ಮಳೆ ಅಭಾವದ ಹೊರತಾಗಿಯೂ ಜುಲೈ ಮೊದಲ ವಾರದಲ್ಲಿಯೇ ಚೇತರಿಕೆಯ ಹಾದಿಯತ್ತ ಸಾಗಿದೆ. ಜುಲೈ 1 ರಿಂದ ಜುಲೈ 5 ರವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಮಳೆ ಕೊರತೆಯಿಂದಾಗಿ ಆತಂಕದಲ್ಲಿ ರೈತರು ಇದೀಗ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.