alex Certify ರಾಜ್ಯದ ರೈತರಿಗೆ ಗುಡ್ ನ್ಯೂಸ್ : 2 ಹೆಕ್ಟೇರ್ ವರೆಗೂ ʻಸ್ಪ್ರಿಂಕ್ಲರ್ ಸೆಟ್ʼ ಸೌಲಭ್ಯ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 2 ಹೆಕ್ಟೇರ್ ವರೆಗೂ ʻಸ್ಪ್ರಿಂಕ್ಲರ್ ಸೆಟ್ʼ ಸೌಲಭ್ಯ ವಿಸ್ತರಣೆ

ಬೆಂಗಳೂರು : ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಅಟಲ್ ಭೂಜಲ್ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ 2023-24ನೇ ಸಾಲಿಗೆ ಅರ್ಹ ರೈತ ಫಲಾನುಭವಿಗಳಿಗೆ ಈವರೆಗೆ 1 ಹೆಕ್ಟೇರ್‍ವರೆಗೆ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ನೀಡಲಾಗಿದ್ದು, ಯೋಜನೆಯ ಮಾರ್ಗಸೂಚಿ ಅನ್ವಯ 2 ಹೆಕ್ಟೇರ್‍ವರೆಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ವಿಸ್ತರಣೆ ಮಾಡಲಾಗಿದೆ.

ಈಗಾಗಲೇ 1 ಹೆಕ್ಟೇರ್‍ವರೆಗೆ ಸ್ಪ್ರಿಂಕ್ಲರ್ ಸೆಟ್  ಸೌಲಭ್ಯ ಪಡೆದ ಅರ್ಹ ರೈತ ಫಲಾನುಭವಿಗಳು ಹೆಚ್ಚುವರಿಯಾಗಿ ಇನ್ನೂ 1 ಹೆಕ್ಟೇರ್‍ವರೆಗೂ ಸ್ಪ್ರಿಂಕ್ಲರ್ ಸೆಟ್ ಸೌಲಭ್ಯವನ್ನು ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಅರ್ಹ ರೈತ ಫಲಾನುಭವಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

 ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕಛೇರಿಯನ್ನು ಸಂಪರ್ಕಿಸಬಹುದು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...