alex Certify ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಹೆಕ್ಟೇರ್ ಗೆ 22,500 ರೂ.ರವರೆಗೆ ಬೆಳೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಹೆಕ್ಟೇರ್ ಗೆ 22,500 ರೂ.ರವರೆಗೆ ಬೆಳೆ ಪರಿಹಾರ

 

ಬೆಂಗಳೂರು : ರಾಜ್ಯದ ರೈತರಿಗೆ ಸಿಹಿಸುದ್ದಿ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎನ್‌ ಡಿಆರ್‌ ಎಫ್‌ ಅನುದಾನ ಬಂದ ಬಳಿಕ ಹೆಕ್ಟೇರ್‌ ಗೆ 22,500 ರವರೆಗೆ ಬೆಳೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು,  ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಅನುದಾನ ನಿರೀಕ್ಷಿಸಿ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅರ್ಹ ರೈತರಿಗೆ ತಲಾ ₹ 2 ಸಾವಿರ ಪಾವತಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೆಕ್ಟೇರ್‌ಗೆ ₹ 22,500 ರವರೆಗೆ ಬೆಳೆ ಪರಿಹಾರ

ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ಪರಿಹಾರ ನಿಗದಿ

ಮಳೆಯಾಶ್ರಿತ ಬೆಳೆಗಳಿಗೆ-8,500 ರೂ.

ನೀರಾವರಿ ಬೆಳೆಗೆ-17,000 ರೂ.

ಬಹುವಾರ್ಷಿಕ ಬೆಳೆಗೆ- 22,500 ರೂ. ನಿಗದಿಪಡಿಸಲಾಗಿದೆ.

ಕೇ೦ದ್ರದಿ೦ದ ಅನುದಾನ ಬಂದ ಕೂಡಲೇ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...