ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 2023-24ನೇ ಸಾಳಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಬರದಿಂದ ಉಂಟಾದ ಬೆಳೆಹಾನಿಗೆ ಘೋಷಿಸಲಾಗಿದ್ದ 2,000 ರೂ. ವರೆಗಿನ ತಾತ್ಕಾಲಿಕ ಬೆಳೆ ಪರಿಹಾರವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲು 105 ಕೋಟಿ ರೂ. ಬಿಡುಗಡೆ ಮಾಡಿದೆ.
2023ನೇ ಸಾಲಿನ ಜೂನ್ ರಿಂದ ಸೆಪ್ಟೆಂಬರ್ ಮಾಹೆಯವರೆಗಿನ ಮುಂಗಾರಿನಲ್ಲಿ ಶೇ. 25 ರಷ್ಟು ಮಳೆಕೊರತೆ ಕಂಡು ಬಂದಿದೆ. ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳಂತೆ, ಹಂತ-1 ರಲ್ಲಿ ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇ.60ಕ್ಕಿಂತ ಹೆಚ್ಚು) ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ (Dry Spell) ಕಂಡು ಬಂದಿರಬೇಕು. ಹಂತ-2 ರಲ್ಲಿ ತತ್ಪರಿಣಾಮ ಮಾನದಂಡಗಳಾದ ಕೃಷಿ ಬಿತ್ತನೆ ฮ, तुळ 3 d d eo (NDVI/ NDWI-Dev (%) and VIC (%)) ತೇವಾಂಶ ಕೊರತೆ (MAI) ಹಾಗೂ ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆಯನ್ನು ಪರಿಶೀಲಿಸಿ ಬರಕ್ಕೆ ತುತ್ತಾಗಿರುವ ತಾಲ್ಲೂಕುಗಳನ್ನು ಗುರುತಿಸಿ, ಬೆಳೆ ಸಮೀಕ್ಷೆ ದೃಡೀಕರಣ (Ground Truthing) ವರದಿ ಜಿಲ್ಲಾಧಿಕಾರಿಗಳಿಂದ ಪಡೆದು, ಬರ ವರ್ಗೀಕರಣ (ಸಾಧಾರಣ & ತೀವು) ಮಾಡಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಬರ ನಿರ್ವಹಣೆ ಕೈಪಿಡಿ 2020 ರನ್ವಯ, ಜೂನ್ 1 ರಿಂದ ಆಗಸ್ಟ್ 19 ರವರೆಗಿನ ಅವಧಿಗೆ ಎಲ್ಲಾ ಮಾನದಂಡಗಳನ್ನು ವಿಶ್ಲೇಷಿಸಿ 195 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ ಈ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 195 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಸರ್ಕಾರಿ ಆದೇಶ ದಿನಾಂಕ:13-9-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಜೂನ್ ರಿಂದ ಸೆಪ್ಟಂಬರ್ ಅಂತ್ಯದ ಅವಧಿಗೆ ಎಲ್ಲಾ ಮಾನದಂಡಗಳನ್ನು ವಿಶ್ಲೇಷಿಸಿ 21 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ ಈ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 21 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಆದೇಶ ದಿನಾಂಕ:12-10-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಮತ್ತು ಜೂನ್ ರಿಂದ ಅಕ್ಟೋಬರ್ ಅಂತ್ಯದ ವರೆಗಿನ ಹವಾಮಾನ ಪರಿಸ್ಥಿತಿ ಅನುಗುಣವಾಗಿ 7 ತಾಲ್ಲೂಕುಗಳನ್ನು ಬರ ಪರಿಸ್ಥಿತಿ ಕಂಡುಬಂದಿರುವ ತಾಲ್ಲೂಕುಗಳೆಂದು ಗುರುತಿಸಿ, ಬೆಳೆ ಸಮೀಕ್ಷೆ ದೃಢೀಕರಣ (GT) ಕೈಗೊಂಡು 7 ತಾಲ್ಲೂಕುಗಳನ್ನು ಮೇಲೆ ಒದಲಾದ (1)ರ ಸರ್ಕಾರಿ ಆದೇಶ ದಿನಾಂಕ:04-11-2023ರಂದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ಬರ ನಿರ್ವಹಣೆ ಕೈಪಿಡಿ 2020ರನ್ವಯ ವಿವಿಧ ಅವಧಿಯ ಹವಾಮಾನ ಪರಿಸ್ಥಿತಿ ಅನುಗುಣವಾಗಿ ಒಟ್ಟಾರೆ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು (196 ತೀವ್ರ ಬರ & 27 ಸಾಧರಣ ಬರ) ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ (ಅನುಬಂದ-1).
ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ / ಸಿಬ್ಬಂದಿಯ ಜಂಟಿ ತಂಡಗಳು ಬೆಳೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಶೇ.33ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವರದಿಯನ್ನು ತಯಾರಿಸಿದ್ದಾರೆ. ಅದರಂತೆ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರ ಪೈಕಿ 40.72 ಲಕ್ಷ ಹೇರ್ ಮಳೆಯಾಶ್ರಿತ 7.39 ಲಕ್ಷ ಹೇಕ್ಟೇರ್, ನೀರಾವರಿ, ಹಾಗೂ 0.07 ಲಕ್ಷ ಹೇರ್ ಬಹುವಾರ್ಷಿಕ ಬೆಳೆಹಾನಿಯಾಗಿದೆ (ಬೆಳವಾರು, ತಾಲ್ಲೂಕುವಾರು ಹಾಗೂ ಮಳೆಯಾಶ್ರಿತ/ನೀರಾವರಿ/ಬಹುವಾರ್ಷಿಕ ವಿವರಗಳು (ಅನುಬಂದ-2) ತಾಲ್ಲೂಕುವಾರು ಬೆಳೆಹಾನಿಗೆ ಇನ್ಪುಟ್ ಸಬ್ಸಿಡಿಗೆ NDRF ಅಡಿಯಲ್ಲಿ ರೂ.4663.12 ಕೋಟಿಗಳ ಆರ್ಥಿಕ ನೆರವನ್ನು ನೀಡುವಂತೆ ಕೋರಿ ರಾಜ್ಯ ಸರ್ಕಾರದಿಂದ ಮೇಲೆ ಓದಲಾದ (2)ರ ದಿನಾಂಕ:15-11-2023ರ ಪತ್ರದಲ್ಲಿ ಒಟ್ಟಾರೆಯಾಗಿ ಕೇಂದ್ರೀಯ ಕೃಷಿ ಮಂತ್ರಾಲಯಕ್ಕೆ ಅಂತಿಮ ಮೆಮೋರಾಂಡಮ್ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಯನುಸಾರ ಬರ ಪರಿಸ್ಥಿತಿಯಿಂದ ಶೇ.33% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಟ 02 ಹೆಕ್ಟೇರ್ಗೆ ಸೀಮಿತಗೊಳಿಸಿ ಈ ಕೆಳಕಂಡ ದರದಲ್ಲಿ ಇನ್ಪುಟ್ ಸಬ್ಸಿಡಿ ನಿಗಧಿಪಡಿಸಲಾಗಿದೆ.