alex Certify `ಫಾರ್ಮಿಂಗ್ ಸೊಸೈಟಿ’ ಜಮೀನು ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಫಾರ್ಮಿಂಗ್ ಸೊಸೈಟಿ’ ಜಮೀನು ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್

ಧಾರವಾಡ :  ಹಲವಾರು ದಶಕಗಳಿಂದ ಅರಣ್ಯದಲ್ಲಿದ್ದುಕೊಂಡು ಜೀವನ ಸಾಗಿಸುತ್ತಿರುವ ಧಾರವಾಡ ಹಾಗೂ ಅಳ್ನಾವರ ತಾಲೂಕಿನ ಕೆಲ ಜನವಸತಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಲ್ಲದೆ ಆ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ತ್ವರಿತ ಗತಿಯಲ್ಲಿ ಪ್ರಸ್ತಾವನೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಇಂದಿಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಉಪ ವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಗೌಳಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು  ಫಾಮಿರ್ಂಗ್ ಸೊಸೈಟಿ ಜಮೀನು  ಸಾಗುವಳಿದಾರರ ಕುರಿತಾಗಿ  ಜರುಗಿದ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಸಚಿವರು. ಶಿವನಗರ, ರೇಣುಕಾನಗರ, ಟಿ.ಆರ್ ನಗರ, ಲಿಂಗನಕೊಪ್ಪ, ಕೊಕ್ಕೆರೆವಾಡ, ಉಡವನಾಗಲಾವಿ, ಹುಣಸಿ ಕುಮರಿ, ಜನವಸತಿ ಪ್ರದೇಶಗಳನ್ನು ಶೀಘ್ರವೇ  ಕಂದಾಯ ಗ್ರಾಮಗಳನ್ನಾಗಿ  ಪರಿವರ್ತಿಸಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು  ಒದಗಿಸಲು ಕ್ರಮ ಕೈಗೊಳ್ಳುವಂತೆ  ಸಚಿವರಾದ ಸಂತೋಷ್ ಲಾಡ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಳ್ನಾವರ ಮಾರ್ಗದಲ್ಲಿ  ರಸ್ತೆಗೆ ಹೊಂದಿಕೊಂಡಿರುವ  ಶಿವನಗರ ಗೌಳಿ ವಾರ್ಡ್‍ದಲ್ಲಿ ಕಳೆದ ನಾಲ್ಕು ದಶಕಗಳಿಂದ  ಗೌಳಿಗರು ವಾಸಿಸುತ್ತಿದ್ದು  ಅವರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು  ಸರಕಾರದ ಜವಾಬ್ದಾರಿಯಾಗಿದೆ.

ಶಿವನಗರ ಗೌಳಿವಾಡ ಕಂದಾಯ ಗ್ರಾಮ ಘೋಷಣೆಗೆ  ಅರ್ಹವಾಗಿದ್ದು. ಗ್ರಾಮ ಸಭೆ ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿ  ಸಭೆಗಳಲ್ಲಿ ಠರಾವು  ಆದಂತೆ ತಕ್ಷಣವೇ ಉಪ ವಿಭಾಗ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಜನವಸತಿ ಪ್ರದೇಶವನ್ನು ಮಾತ್ರ ಕಂದಾಯ ಭೂಮಿಯನ್ನಾಗಿಸಲು  ಅರಣ್ಯ ಇಲಾಖೆ ಅಧಿಕಾರಿಗಳು ಸಮ್ಮತಿಸಿದರು. ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕ  ತೊಂದರೆಯಾಗಿದ್ದು  ತಕ್ಷಣವೆ ಸೋಲಾರ್ ಬೀದಿ ದೀಪ ಅಳವಡಿಸುವಂತೆ ಪಿ.ಡಿ.ಓ ಗೆ ಸೂಚಿಸಲಾಯಿತು.

ಇತೀಚೆಗೆ ಮಳೆಯಿಂದಾಗಿ ಶಾಲಾ ಗೋಡೆ ಕುಸಿದಿದ್ದು  ಸದ್ಯ  ಸ್ಥಳೀಯರೊಬ್ಬರ ಕಟ್ಟಡದಲ್ಲಿ ಮಕ್ಕಳ ಕಲಿಕೆ ಮುಂದುವರೆದಿದ್ದು  ಶೀರ್ಘವೇ ಶಾಲಾ ಕಟ್ಟಡ ದುರಸ್ತಿಗೆ ಕೈಗೊಳ್ಳಲಾಗುವುದೆಂದು ಬಿ.ಇ.ಓ ಸಭೆಗೆ ತಿಳಿಸಿದರು.

ರೇಣುಕಾನಗರದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ನೀರಿನ ಟ್ಯಾಂಕ್‍ನ್ನು ಹಾಗೂ ಜಲಜೀವನ ಮಿಷನ್ ಮುಗಿಸಿ  ನೀರು ಸರಬರಾಜಿಗೆ ತೊಂದರೆಯಾಗದಂತೆ  ಸೂಚಿಸಿದರು. ಲಿಂಗನಕೊಪ್ಪ, ಮಡಿಕೆಕೊಪ್ಪ, ಕಿವುಡೇ ಬೆಲ್ ಜನವಸತಿಗಳನ್ನು  ಕಂದಾಯ ಗ್ರಾಮಗಳನ್ನಾಗಿಸಲು  ಈಗಾಗಲೇ ಕ್ರಮ ಕೈಗೊಳ್ಳುತಿರುವುದಾಗಿ ಸಭೆಗೆ ತಿಳಿಸಲಾಯಿತು.

ಅಂಬೋಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಮಸ್ಯೆ ನಿವಾರಣೆಗೆ  ತಕ್ಷಣವೇ 13  ವಿದ್ಯುತ್ ಕಂಬಗಳನ್ನು  ಅಳವಡಿಸುವಂತೆ  ಸಚಿವರು ಹೆಸ್ಕಾಂ ಕಾರ್ಯನಿರ್ವಾಹಕ  ಅಭಿಯಂತ್ರರರಿಗೆ  ಸಭೆಯಲ್ಲಿ ದೂರವಾಣಿ ಮುಖಾಂತರ ಸೂಚಿಸಿದರು.

ಟಿ. ರಾಮಚಂದ್ರ ನಗರದಲ್ಲಿ ಬಸ್ ನಿಲ್ಲುಗಡೆ ಹಾಗೂ ಶಾಲಾ ದುರಸ್ತಿ ಕಾರ್ಯವನ್ನು  ಒಂದು ವಾರದಲ್ಲಿ ಬಗೆಹರಿಸುವಂತೆ ಸಚಿವರು ಸೂಚಿಸಿದರು. ಉಡವನಾಗಲಾವಿ ಹಾಗೂ ಹುಣಸಿ ಕುಮರಿ ಜನವಸತಿಗಳನ್ನು  ಕಂದಾಯ ಗ್ರಾಮ  ಪರಿವರ್ತನೆಗೆ ತಕ್ಷಣವೇ ಪ್ರಸ್ತಾವನೆಗಳನ್ನು ಪೂರ್ಣಗೊಳಿಸುವಂತೆ ಸಚಿವರು ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ತಿಳಿಸಿದರು.

ಫಾರ್ಮಿಂಗ್ ಸೊಸೈಟಿ ಜಮೀನು ಸಾಗುವಳಿದಾರ ರೈತರ ಮಾಲೀಕತ್ವಕ್ಕೆ; ಕಲಘಟಗಿ, ಅಳ್ನಾವರ,  ಧಾರವಾಡ ತಾಲೂಕಿನಲ್ಲಿ  ಸರಕಾರಿ ಭೂಮಿಯನ್ನು ಗುತ್ತಿಗೆಗೆ ಪಡೆದು  ರೈತರಿಗೆ ಉಳುಮೆ ಮಾಡಲು  ಫಾಮಿರ್ಂಗ್ ಸೊಸೈಟಿಗಳನ್ನು ನೀಡಿದ್ದು . ಜಮೀನನ್ನು ನಿಯಮಾನುಸಾರ  ಸದ್ಯ ಸಾಗುವಳಿ ಮಾಡುತ್ತಿರುವ ರೈತರ  ಹೆಸರಿಗೆ ಖಾತಾ ಮಾಡುವಂತೆ  ಸಚಿವರು ಈ ಹಿಂದಿನ ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಅಶೋಕ ತೇಲಿ ಇವರಿಗೆ  ಸೂಚಿಸಿದ್ದರು. ಸದ್ಯ ಪಾನಿರ್ಂಗ್ ಸೊಸೈಟಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದು  ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಮಾಲಿಕತ್ವ  ನೀಡುವ ಪ್ರಕ್ರಿಯೆ  ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...