ಬೆಂಗಳೂರು : ರಾಜ್ಯದ ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಸಿಕ್ಕಿದ್ದು, ರೈತ ವಿದ್ಯಾನಿಧಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ವಿದ್ಯಾನಿಧಿ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಫೆಬ್ರವರಿ 29ರೊಳಗೆ ಸಲ್ಲಿಸಬೇಕು. ಪೋಷಕರ ಆದಾಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ವಿದ್ಯಾನಿಧಿ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಫೆಬ್ರವರಿ 29ರೊಳಗೆ ಸಲ್ಲಿಸಬೇಕು. ಪೋಷಕರ ವಾರ್ಷಿಕ ಆದಾಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
ಈ ವಿದ್ಯಾರ್ಥಿವೇತನವನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವಂತ ವಿದ್ಯಾರ್ಥಿಗಳು ಅವರ ಪೋಷಕರ ಆದಾಯವು ಸಾಮಾನ್ಯ ವರ್ಗದವರಿಗೆ 2.50 ಲಕ್ಷ ರೂಪಾಯಿ ಮೀರಬಾರದು ಎಂಬುದಾಗಿ ಷರತ್ತು ವಿಧಿಸಿದೆ.ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತ ಮುಖ್ಯ ಉದ್ದೇಶವನ್ನು ರೈತ ವಿದ್ಯಾನಿಧಿ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಯೋಜನೆಯಡಿ 2500 ರೂ ಮತ್ತು ಗರಿಷ್ಠ 110000 ರೂ ವಿದ್ಯಾರ್ಥಿವೇತನ ನೀಡಲಾಗುತ್ತದೆ .