ಧಾರವಾಡ : ಧಾರವಾಡ ಜಿಲ್ಲೆಯ ರೈತ ಮಕ್ಕಳಿಗಾಗಿ 2025-26 ನೇ ಸಾಲಿಗೆ 10 ತಿಂಗಳ (ಮೇ 02, 2025 ರಿಂದ ಫೆಬ್ರವರಿ 28, 2026 ರವರೆಗೆ) ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮಹಿಳಾ-05 ಹಾಗೂ ಪುರುಷ–10, ಒಟ್ಟು–15 ಅಭ್ಯರ್ಥಿಗಳಿಗೆ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಫಾರಂನ್ನು ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ ಅಥವಾ ಇಲಾಖಾ ವೆಬ್ಸೈಟ್ https://horticulturedir.karnataka.gov.in ನಲ್ಲಿ ಮಾರ್ಚ್ 31, 2025 ರೊಳಗಾಗಿ ಡೌನಲೋಡ್ ಮಾಡಿಕೊಂಡು, ಅರ್ಜಿ ಶುಲ್ಕದ ಬಾಬತ್ತು ಸಾಮಾನ್ಯ ಅಭ್ಯರ್ಥಿಗಳಗೆ ರೂ. 30 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 15 ಮೌಲ್ಯದ ಇಂಡಿಯನ್ ಪೆÇೀಸ್ಟಲ್ ಆರ್ಡರ್ (ಐಪಿಓ) ಅಥವಾ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾಪಂಚಾಯತ) ಧಾರವಾಡ ಅವರ ಹೆಸರಿನಲ್ಲಿ ಪಡೆದು, ಭರ್ತಿ ಮಾಡಿದ ಅಗತ್ಯ ದಾಖಲಾತಿಗಳೊಂದಿಗೆ ಏಪ್ರಿಲ್ 1, 2025 ರೊಳಗಾಗಿ ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0836-2957801 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.