ಬಳ್ಳಾರಿ : ಪ್ರಸ್ತಕ ಸಾಲಿನಲ್ಲಿ ಫಲಾನುಭವಿ ಆಧಾರಿತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಹೊಸ ಪಾಲನೆ ಕೊಳಗಳ ನಿರ್ಮಾಣ (ನರ್ಸರಿ/ಮೀನುಮರಿ ಪಾಲನೆ ಕೊಳಗಳು), ಲವಣ/ಕ್ಷಾರಿಯ ಪ್ರದೇಶಗಳಿಗೆ ಹೊಸ ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವೆಚ್ಚ ಹೊಸ ಮೀನುಕೃಷಿ ಕೊಳಗಳ ನಿರ್ಮಾಣ, ಮತ್ತು ಸಮಗ್ರ ಮೀನುಕೃಷಿ ಸ್ಕ್ಯಾಂಪಿ, ಪಂಗಾಸಿಯಸ್, ತಿಲಾಪಿಯ ಸೇರಿದಂತೆ ಸಿಹಿ ನೀರಿನ ಜಲಕೃಷಿಗೆ ಹೂಡಿಕೆ ವೆಚ್ಚಗಳು, ಐಸ್ ಬಾಕ್ಸ್ನೊಂದಿಗೆ ಮೋಟಾರ್ ಸೈಕಲ್ ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ, ಅಲಂಕಾರಿಕ ಮೀನುಗಳ ಕಿಯೋಸ್ಕ್ ಸೇರಿದಂತೆ ಮೀನು ಕಿಯೋಸ್ಕ್ ನಿರ್ಮಾಣ, ಸಾಂಪ್ರಾದಾಯಕ ಮೀನುಗಾರರಿಗೆ ಎಫ್ಆರ್ಪಿ ಬೋಟ್ ಮತ್ತು ಬಲೆಗಳನ್ನು ಖರೀದಿಸಲು ಬ್ಯಾಕ್ಯಾರ್ಡ ಮಿನಿ ಆರ್.ಎ.ಎಸ್ ಹಾಗೂ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಆಸಕ್ತಿ ಹೊಂದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.60ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.40 ರಂತೆ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.16 ಕೊನೆಯ ದಿನವಾಗಿದ್ದು, ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಹಾಗೂ ಮೊ.9449593156, ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಮೊ.8970754167 ಮತ್ತು ಸಂಡೂರು ಮೊ.9620177588 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.