ಮಡಿಕೇರಿ : ಪ್ರಸ್ತುತ 2023-24ನೇ ಸಾಲಿನಲ್ಲಿ ಆಗಸ್ಟ್ ನಿಂದ ನವೆಂಬರ್ 30 ರವರೆಗೆ ಚಾಲ್ತಿಯಲ್ಲಿದ್ದ ಸಹಾಯಧನದ ಯೋಜನೆಯನ್ನು ಜನವರಿ, 07 ರವರೆಗೆ ವಿಸ್ತರಿಸಲಾಗಿದೆ.
ಸಾಮಾನ್ಯ ಸಣ್ಣ ಕಾಫಿ ಬೆಳೆಗಾರರು (10 ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ತಮ್ಮ ತೋಟಗಳಲ್ಲಿ ಕಾಫಿ ಮರುನಾಟಿ, ಹೊಸದಾಗಿ ಕೆರೆ/ ತೆರೆದ ಬಾವಿ ನಿರ್ಮಿಸಲು ಹಾಗೂ ತುಂತುರು ನೀರಾವರಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜನವರಿ, 07 ಕೊನೆಯ ದಿನವಾಗಿದೆ. ಅರ್ಹ ಬೆಳೆಗಾರರು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದು ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕರು(ವಿಸ್ತರಣೆ) ತಿಳಿಸಿದ್ದಾರೆ.