alex Certify ರೈತರಿಗೆ ಕೃಷಿ ಇಲಾಖೆಯಿಂದ ಗುಡ್ ನ್ಯೂಸ್: ಸಾವಯವ ಸಿರಿ ಯೋಜನೆಯಡಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಕೃಷಿ ಇಲಾಖೆಯಿಂದ ಗುಡ್ ನ್ಯೂಸ್: ಸಾವಯವ ಸಿರಿ ಯೋಜನೆಯಡಿ ಅರ್ಜಿ ಆಹ್ವಾನ

ಬೆಂಗಳೂರು: ‘’ಸಾವಯವ ಸಿರಿ’’ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಹತ್ತು ವರ್ಷಗಳ ಅನುಭವವುಳ್ಳ ಆಯಾ ತಾಲ್ಲೂಕುಗಳ ಟ್ರಸ್ಟ್ ಅಥವಾ ಸೊಸೈಟಿ ಕಾಯ್ದೆಯಡಿ ನೊಂದಾಯಿತ ಸಾವಯವ ಕೃಷಿಕರ ಸಂಘ, ಸಾವಯವ ಒಕ್ಕೂಟ ಅಥವಾ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

‘ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸಲು’ ಯೋಜನೆಯನ್ನು ರೂಪಿಸಲಾಗಿದ್ದು, ಈ ಹೊಸ ಯೋಜನೆಯನ್ನು ‘’ಸಾವಯವ ಸಿರಿ’’ ಯೋಜನೆಯ ಹೆಸರಿನಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿದೆ.

ಸಾವಯವ ಕೃಷಿ ಉತ್ತೇಜನದಲ್ಲಿ ತಾಲ್ಲೂಕುಗಳಲ್ಲಿ ಈಗಾಗಲೇ ಸಾವಯವ ಕೃಷಿಯಲ್ಲಿ ತೊಡಗಿರುವ ರಾಜ್ಯದ ಟ್ರಸ್ಟ್ ಅಥವಾ ಸೊಸೈಟಿ ಕಾಯ್ದೆಯಡಿ ನೊಂದಾಯಿತ ಸಾವಯವ ಕೃಷಿಕರ ಸಂಘ/ ಸಾವಯವ ಒಕ್ಕೂಟಗಳ ಮೂಲಕ ಯೋಜನೆಯನ್ನು ಅನುಷ್ಟಾಗೊಳಿಸಲಾಗುವುದು.

ಸಾವಯವ ಕೃಷಿ ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಅನುಭವ ಹೊಂದಿರುವ ಸ್ಥಳೀಯ ನೋಂದಾಯಿತ ಸಾವಯವ ರೈತರ ಗುಂಪು/ ಸಂಘ/ ಒಕ್ಕೂಟಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾಗುವ ಗುಂಪುಗಳು ತಮ್ಮ ವ್ಯಾಪ್ತಿಯ ಕೃಷಿಕರನ್ನು ಉತ್ತೇಜಿಸುವುದು ಹಾಗೂ ಹೆಚ್ಚಿನ ರೈತರನ್ನು ಸಾವಯವ ಕೃಷಿ ವ್ಯಾಪ್ತಿ ಒಳಪಡಿಸುವುದು.

ಆಸಕ್ತ ಸಾವಯವ ಕೃಷಿಕರ ಸಂಘ/ ಸಾವಯವ ಒಕ್ಕೂಟ/ ಗುಂಪುಗಳು ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2022ರ ಏಪ್ರಿಲ್ 2ರೊಳಗೆ ಆಯಾ ತಾಲ್ಲೂಕು ವ್ಯಾಪ್ತಿಯ ಸಂಬಂಧಪಟ್ಟ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಸಲ್ಲಿಸುವುದು.

ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ವ್ಯಾಪ್ತಿಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...