ನವದೆಹಲಿ: ಕೇಂದ್ರ ಸರ್ಕಾರವು ರೈತ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಕಿಸಾನ್ ಸಮ್ಮಾನ್ ಯೋಜನೆಯಡಿ ಮಹಿಳಾ ರೈತರಿಗೆ 12,000 ರೂಪಾಯಿ ನೆರವು ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಭೂಮಾಲೀಕ ಮಹಿಳಾ ರೈತರಿಗೆ ವಾರ್ಷಿಕ ಪಾವತಿಯನ್ನು 12,000 ರೂ.ನೆರವು ನೀಡಲು ಸಿದ್ಧತೆ ನಡೆಸಿದ್ದು,ಈ ಯೋಜನೆಯನ್ನು ಫೆಬ್ರವರಿ 1 ರಂದು ಬಜೆಟ್ನಲ್ಲಿ ಘೋಷಿಸುವ ಸಾಧ್ಯತೆಯಿದೆ ಮತ್ತು ಸರ್ಕಾರಕ್ಕೆ ಹೆಚ್ಚುವರಿ 120 ಬಿಲಿಯನ್ ರೂಪಾಯಿಗಳು ವೆಚ್ಚವಾಗಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ” ಕಾರ್ಯಕ್ರಮದ ಅಡಿಯಲ್ಲಿ, ಸರ್ಕಾರವು ವಾರ್ಷಿಕವಾಗಿ 6,000 ರೂಪಾಯಿಗಳನ್ನು ಪುರುಷ ಮತ್ತು ಮಹಿಳಾ ರೈತರಿಗೆ ವರ್ಗಾಯಿಸುತ್ತದೆ.