ಉಡುಪಿ : ರಾಜ್ಯದಲ್ಲಿ ಈಗಾಗಲೇ ಶಕ್ತಿ, ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಈಗ ಗೃಹಜ್ಯೋತಿ ಆರಂಭವಾಗಿದೆ. ಇದೇ ಆಗಸ್ಟ್ 18 ಅಥವಾ 20 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶದ ಮೂಲಕ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕುಂಜಿಬೆಟ್ಟು ಕ.ವಿ.ಪ್ರ.ನಿ.ನಿ ನೌಕರರ ಸಂಘದ ಸಭಾಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿನ ಎಲ್ಲಾ ಭಾಷೆ, ಜಾತಿ, ಧರ್ಮದವರ ಶ್ರೇಯೋಭಿವೃದ್ಧಿಗಾಗಿ ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ ಐದು ಯೋಜನೆಗಳಲ್ಲಿ, ಗೃಹಜ್ಯೋತಿ ಯೋಜನೆ ಆರಂಭದ ನಂತರ, ಮೂರು ಯೋಜನೆಗಳು ಕೇವಲ ಮೂರು ತಿಂಗಳಲ್ಲಿ ಜಾರಿಯಾದಂತಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಸರ್ವರಿಗೂ ಸಮ ಪಾಲು ಸಮ ಬಾಳು ಎಂಬ ತತ್ವದಡಿಯಲ್ಲಿ ರಾಜ್ಯವನ್ನು ಪ್ರಗತಿಯುತ್ತ ಮುನ್ನೆಡೆಸುತ್ತಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಶಕ್ತಿ, ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಈಗ ಗೃಹಜ್ಯೋತಿ ಆರಂಭವಾಗಿದೆ. ಇದೇ ಆಗಸ್ಟ್ 18 ಅಥವಾ 20 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶದ ಮೂಲಕ ಗೃಹಲಕ್ಷ್ಮೀ ಯೋಜನೆ ಜಾರಿಯಾಗಲಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಘೋಷಣೆ ಮಾಡಿತು ಎಂದರು.
ರಾಜ್ಯದ 1.42 ಕೋಟಿ ಗ್ರಾಹಕರು ಗೃಹಜ್ಯೋತಿ, 1.28 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದು, ಶಕ್ತಿಯೋಜನೆಯಡಿ ಇದುವರೆಗೆ 30 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷಿö್ಮ ಯೋಜನೆಯಡಿ 1.28 ಕೋಟಿ ಕುಟುಂಬಗಳಿಗೆ ಡಿಬಿಟಿ ಮೂಲಕ ಪ್ರತೀ ತಿಂಗಳು ರೂ.2000 ನೀಡಲಿದ್ದು, ಇದಕ್ಕಾಗಿ ಇದುವರೆಗೆ 1 ಕೋಟಿ ಕುಟುಂಬಗಳ ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 3,15,692 ಗ್ರಾಹಕರಿದ್ದು, ಈ ಪೈಕಿ ಶೇ.80 ರಷ್ಟು ಅಂದರೆ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ. ನಮ್ಮ ಸರ್ಕಾರದಿಂದ ರಾಜ್ಯ ಸುಭದ್ರ ಮತ್ತು ಪ್ರಗತಿಪಥ ದತ್ತ ಮುನ್ನಡೆಯಲಿದೆ ಎಂದರು.