ಬೆಂಗಳೂರು : ಇ-ಸ್ವತ್ತು ಮಾಡಿಸುವ ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮ ಠಾಣೆ ವ್ಯಾಪ್ತಿಯಲ್ಲಿ ಆಸ್ತಿಯ ಇ-ಖಾತೆ ಪಡೆಯಲು ದಿಶಾಂಕ್ ಆ್ಯಪ್ ಬಳಸಲಾಗುತ್ತಿದೆ.
ಈವರೆಗೆ ನಾಡಕಚೇರಿ, ತಾಲೂಕು ಕಚೇರಿಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಹಾಗೂ ಕೃಷಿ ಜಮೀನುಗಳ ಅಳತೆ, ಇ-ಸ್ವತ್ತು ನೀಡುವಲ್ಲಿ ಪರಿಣಾಮಕಾರಿಯಾಗಿ ದಿಶಾಂಕ್ ಆ್ಯಪ್ ಸುಲಭವಾಗಿ ಕೆಲಸ ಮಾಡುತ್ತಿದೆ. ಇದನ್ನು ಇನ್ಮುಂದೆ ಗ್ರಾಮ ಮಟ್ಟದಲ್ಲೂ ಇದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.
ರೈತರು ತಮ್ಮ ಜಮೀನಿನ ಅಳತೆ ಮಾಡಲು ಕಂದಾಯ ಇಲಾಖೆಯು ದಿಶಾಂಕ್ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ದಿಶಾಂಕ್ ಆ್ಯಪ್ ಸಹಾಯದಿಂದ ರೈತರು ಜಮೀನನ ಅಳತೆ ಮಾಡಬಹುದಾಗಿದೆ. 1960 ರ ಸರ್ವೆ ನಕಾಶೆಗಳ ಆದಾರದಲ್ಲಿ ಕಂದಾಯ ಇಲಾಖೆಯು ಈ ಆ್ಯಪ್ ಅಭಿವೃದ್ಧಿ ಪಡಿಸಿದೆ.
ಜಮೀನಿನ ಅಳತೆ ಮಾಡುವುದರಿಂದ ರೈತರು ತಮ್ಮ ಜಮೀನಿನ ಅಕ್ಕಪಕ್ಕದ ಕೆರೆಕುಂಟೆಗಳ ಪ್ರದೇಶ ವಿಸ್ತರಣೆ, ತಮ್ಮ ಜಮೀನು ಅಕ್ಕಪಕ್ಕದವರಿಗೆ ಒತ್ತುವರಿಯಾಗಿದೆ ಎಂಬ ಮಾಹಿತಿ ಪಡೆಯಬಹುದು. ರೈತರ ಜಮೀನಿನ ನೆರೆಹೊರೆಯ ಜಮೀನು ಕೆರೆ ಕಟ್ಟೆ, ಹಳ್ಳಕೊಳ್ಳ ಖರಾಬು ಜಮೀನಿದ್ದರೆ ರೈತರು ದಿಶಾಂಕ್ ಆ್ಯಪ್ ಸಹಾಯದಿಂದ ಪಡೆಯಬಹುದು.