ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಸಿಹಿಸುದ್ದಿ ನೀಡಿದ್ದು, ನವೆಂಬರ್ 10 ರಿಂದ 2,000 ಬಸ್ ಗಳನ್ನು ಕಾರ್ಯಾಚರಣೆಗೊಳಿಸಲಿದೆ.
ನವೆಂಬರ್ 11 ಎರಡನೇ ಶನಿವಾರ, ನವೆಂಬರ್ 12 ರಂದು ಭಾನುವಾರ, ನವೆಂಬರ್ 14 ರಂದು ಬಲಿಪಾಡ್ಯಮಿ ಹಬ್ಬವಿರುವುದಿರಂದ ಸಾಲು ಸಾಲು ರಜೆ ಇದೆ. ಹೀಗಾಗಿ ನವೆಂಬರ್ 10 ರ ರಾತ್ರಿಯಿಂದಲೇ ಬೆಂಗಳೂರಿನಿಂದ ಬೇರೆ ನಗರ, ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ 2,000 ಬಸ್ ಗಳ ಸೇವೆ ನೀಡಲಿದೆ.
ಬೆಂಗಳೂರಿನ ಮೆಜೆಸ್ಟ್ರಿಕ್ ನ ಕೆಂಪೇಗೌಡ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ನಿಲ್ದಾಣಗಳಿಂದ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ನಾಲ್ಕಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ. ರಷ್ಟು ಹಾಗೂ ಹೋಗುವ ಮತ್ತು ವಾಪಸು ಬರುವ ಪ್ರಯಾಣದ ಟಿಕೆಟ್ ಕಾಯ್ದಿರಿಸಿದ್ರೆ ಶೇ. 10 ರಷ್ಟು ರಿಯಾಯಿತಿ ನೀಡಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ.