alex Certify ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : ʻರಾಷ್ಟ್ರೀಯ ಯುವದಿನʼದಂದೇ ʻಯುವನಿಧಿʼ ಯೋಜನೆಗೆ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : ʻರಾಷ್ಟ್ರೀಯ ಯುವದಿನʼದಂದೇ ʻಯುವನಿಧಿʼ ಯೋಜನೆಗೆ ಚಾಲನೆ

ಬೆಂಗಳೂರು : ನಿರುದ್ಯೋಗಿ ಯುವಕರು ವಿದ್ಯಾರ್ಹತೆಗೆ ತಕ್ಕ ಉದ್ಯೋಗವನ್ನು ಕಂಡುಕೊಳ್ಳುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಸದುದ್ದೇಶದೊಂದಿಗೆ ರಾಜ್ಯ ಸರ್ಕಾರವು ಮಾಸಿಕ ನಿರುದ್ಯೋಗ ಭತ್ಯೆ ನೀಡುತ್ತಿದೆ. ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು, ಇಂಟರ್‌ನೆಟ್‌ ವೆಚ್ಚ ಭರಿಸಲು, ಆರ್ಥಿಕ ಒತ್ತಡವನ್ನು ನಿಭಾಯಿಸಲು ಯುವಕರಿಗೆ ಸಹಾಯಧನವು ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆ ಯುವಕರ ಸ್ಪೂರ್ತಿ ಸ್ವಾಮಿ ವಿವೇಕಾನಂದರ ಜಯಂತಿ ರಾಷ್ಟ್ರೀಯ ಯುವದಿನದಂದೇ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ಈ ಯೋಜನೆಯಡಿ ಪದವಿ ಪಾಸಾದವರಿಗೆ ರೂ.3000 ಮತ್ತು ಡಿಪ್ಲೋಮಾ ಪಾಸಾದವರಿಗೆ ರೂ.1500ಗಳನ್ನು ನೀಡಲಾಗುತ್ತದೆ.

ಅರ್ಹರು ಸೇವಾ ಸಿಂಧು ಪೋರ್ಟಲ್, ಅಟಲ್ ಜೀ ಕೇಂದ್ರ, ಕರ್ನಾಟಕ-1, ಬಳ್ಳಾರಿ-1 ಮತ್ತು ಇತರೆ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು.

ಅರ್ಹರು:

2023ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಪದವಿ, ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರಾಗಿರಬೇಕು. ಸ್ವಯಂ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಅರ್ಹರು. ಕರ್ನಾಟಕದಲ್ಲಿ ವಾಸವಿರುವವರು (ಕನಿಷ್ಠ 6 ವರ್ಷಗಳವರೆಗೆ ಪದವಿ, ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು).

ದಾಖಲೆಗಳು:

ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...