ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗುರುವಾರ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ನವೆಂಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ.
ತಿರುಮಲ ತಿರುಪತಿಯಲ್ಲಿ ವಸತಿ ಕೋಟಾಕ್ಕಾಗಿ ದೇವಾಲಯವು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ ಮತ್ತು ಭಕ್ತರು ವೆಬ್ಸೈಟ್ನಲ್ಲಿ ಕಾಯ್ದಿರಿಸಬಹುದು.
ನವೆಂಬರ್ ತಿಂಗಳಿಗೆ 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಟಿಕೆಟ್ ಬಿಡುಗಡೆ ಮಾಡಿದೆ. ಕಲ್ಯಾಣೋತ್ಸವ, ಅರ್ಜಿತ ಬ್ರಹ್ಮೋತ್ಸವ, ಊಂಜಲ್ ಸೇವೆ, ಸಹಸ್ರದಿಪಾಲಂಕಾರ ಸೇವಾ ಟಿಕೆಟ್ ಗಳನ್ನು ಆಗಸ್ಟ್ 22 ರಂದು ಬಿಡುಗಡೆ ಮಾಡಲಾಯಿತು. ಕಳೆದ ಮೂರು ದಿನಗಳಲ್ಲಿ ವರ್ಚುವಲ್ ಸೇವಾ ಟಿಕೆಟ್ಗಳು, ಅಂಗಪ್ರದಕ್ಷಿಣೆ ಟೋಕನ್ ಗಳು ಮತ್ತು ಶ್ರೀವಾರಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್ ಗಳನ್ನು ಸಹ ಬಿಡುಗಡೆ ಮಾಡಲಾಗಿದೆ.