ಬೆಂಗಳೂರು : ಮುಜರಾಯಿ ಇಲಾಖೆ ರಾಜ್ಯದ ಜನರಿಗೆ ಸಿಹಿಸುದ್ದಿ ಒಂದನ್ನು ನೀಡಿದೆ. ಇ -ಪ್ರಸಾದ ಸೇವೆ ಮೂಲಕ ರಾಜ್ಯದ 400 ದೇಗುಲಗಳ ಪ್ರಸಾದ ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಅದು ಕೂಡ 15 ದಿನಗಳ ಒಳಗೆ.
ಹೌದು, ಇನ್ನೇನು ಶುಭ ಸಮಾರಂಭಗಳ ಸೀಸನ್ ಶುರು. ಮದುವೆ, ನಾಮಕರಣ, ಗೃಹ ಪ್ರವೇಶ ಎಲ್ಲಾ ಶುರು ಆಗ್ತಿದೆ. ಶುಭ ಸಮಾರಂಭಕ್ಕೆ ದೂರದ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರೋದು ಕಷ್ಟನೇ ಬಿಡಿ. ಆದರೀಗ ಈ ಕಷ್ಟಕ್ಕೆ ಸರ್ಕಾರ ಪರಿಹಾರ ನೀಡಿದೆ. 15 ದಿನದೊಳಗೆ ನಿಮ್ಮ ಮನೆ ಬಾಗಿಲಿಗೆ ಪ್ರಸಾದವನ್ನು ತಲುಪಿಸಲಿದೆ.
ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದವನ್ನು ಆನ್ ಲೈನ್ ನಲ್ಲಿ ಮನೆಗೆ ತಲುಪಿಸುವ ಪ್ರಯೋಗವನ್ನು ಸರ್ಕಾರ ಆರಂಭಿಸಿತ್ತು, ಇದೀಗ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಮುಂದಿನ 15 ದಿನಗಳಲ್ಲಿ ರಾಜ್ಯದಲ್ಲಿ 400 ದೇವಾಲಯಗಳಲ್ಲಿ ಇ ಪ್ರಸಾದ ಸೇವೆ ಆರಂಭಿಸುವ ಯೋಜನೆಗೆ ಮುಜರಾಯಿ ಇಲಾಖೆ ಚಾಲನೆ ನೀಡಲಿದೆ. ವೃದ್ದರು, ವಿಶೇಷಚೇತನರು, ಮಹಿಳೆಯರು ಮನೆಯಲ್ಲೇ ಕುಳಿತು ಪ್ರಸಾದವನ್ನು ಮನೆಗೆ ತರಿಸಿಕೊಳ್ಳಲು ಈ ಯೋಜನೆ ಉಪಕಾರಿಯಾಗಲಿದೆ.