ಬೆಂಗಳೂರು : ಗುತ್ತಿಗೆದಾರರಿಗೆ ಬಿಬಿಎಂಪಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಗುಡ್ ನ್ಯೂಸ್ ನೀಡಿದ್ದು, 1300 ಕೋಟಿ ಬಾಕಿ ಬಿಲ್ ಬಿಡುಗಡೆಗೆ ಪಾಲಿಕೆ ಅಸ್ತು ಎಂದಿದೆ.
ಇದೀಗ ಮೊದಲ ಹಂತದಲ್ಲಿ 1,300 ಕೋಟಿ ಬಾಕಿ ಬಿಲ್ ಬಿಡುಗಡೆಗೆ ಪಾಲಿಕೆ ಅಸ್ತು ಅಂದಿದೆ . ಹೌದು, 1,300 ಕೋಟಿ ರೂಪಾಯಿ ಬಾಕಿ ಬಿಲ್ ಬಿಡುಗಡೆ ಮಾಡಲು ಬಿಬಿಎಂಪಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಶೇಕಡ 50ರಷ್ಟು ಬಿಡುಗಡೆ ಮಾಡಲು ಬಿಬಿಎಂಪಿ ಒಪ್ಪಿದೆ.ಒಟ್ಟು 2,600 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಹೇಳಲಾಗಿದ್ದು, ಅದರಲ್ಲಿ ಅರ್ಧದಷ್ಟು ಅಂದ್ರೆ 1,300 ಕೋಟಿ ಬಿಡುಗಡೆ ಆಗಲಿದೆ.
ಬಾಕಿ ಬಿಲ್ ಪಾವತಿ ಮಾಡದಿದ್ದರೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದರು. ಬಿಲ್ ಪಾವತಿ ಮಾಡದಿದ್ದರೆ ಕೆಲಸ ನಿಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಎಚ್ಚರಿಕೆ ನೀಡಿದ್ದರು.