
ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರಿ ಏರಿಕೆ ಕಂಡಿದ್ದ ಚಿನ್ನದ ದರ ಇಳಿಕೆ ಹಾದಿಯಲ್ಲಿದೆ. ಕಳೆದ ಹತ್ತು ದಿನದಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 4750 ರೂ.ನಷ್ಟು ಇಳಿಕೆಯಾಗಿದೆ. ಈ ಮೂಲಕ ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದ್ದು, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಕಡಿಮೆಯಾಗುವ ಸಂಭವ ಇದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಬಳಿಕ ಡಾಲರ್ ಮೌಲ್ಯ ಏರಿಕೆ ಕಂಡಿದೆ. ತೈಲ ಪೂರೈಕೆಗೆ ಉತ್ತೇಜನ, ಚೀನಿ ಸರಕುಗಳ ಮೇಲಿನ ಸುಂಕಗಳು, ಕಟ್ಟುನಿಟ್ಟಿನ ವಲಸೆ ಕಾನೂನುಗಳಂತಹ ಟ್ರಂಪ್ ಅವರ ದೇಶಿಯ ನೀತಿಗಳು ಅಮೆರಿಕದ ಬಲವಾದ ಆರ್ಥಿಕತೆಗೆ ಕಾರಣವಾಗಬಹುದಾಗಿದ್ದು, ಇದರ ಪರಿಣಾಮ ಡಾಲರ್ ಮೌಲ್ಯ ಇನ್ನಷ್ಟು ವೃದ್ಧಿಸಬಹುದು. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಗೆ ಕಡಿವಾಣ ಬೀಳುವ ಸಂಭವ ಇದೆ.