ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದ್ದು, ಸೆಪ್ಟೆಂಬರ್ 15ರ ಬಳಿಕ ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವೈಟ್ ಫೀಲ್ಡ್ ನಿಂದ ಚಲ್ಲಘಟ್ಟದವರೆಗೆ ವ್ಯಾಪಿಸಿರುವ ಬೆಂಗಳೂರು ಮೆಟ್ರೋದ ಸಂಪೂರ್ಣ ನೇರಳೆ ಮಾರ್ಗವು ಸೆಪ್ಟೆಂಬರ್ 15 ರ ನಂತರ ಆರಂಭವಾಗಲಿದೆ ಎಂದು BMRCL ತಿಳಿಸಿದೆ.
ಎಲ್ಲಾ ಬಾಕಿಯಿರುವ ಕೆಲಸಗಳು, CMRS ತಪಾಸಣೆಯೊಂದಿಗೆ ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳ್ಳಲಿದೆ, ಈ ಮಾರ್ಗದಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಸೆ.15 ರ ಬಳಿಕ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಅಂಜುಮ್ ಪರ್ವೇಜ್ ಹೇಳಿದರು.