ಬೆಂಗಳೂರು : ನಾಡಹಬ್ಬ ದಸರಾ ಪ್ರಯುಕ್ತ ಊರಿಗೆ ತೆರಳಲು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 100 ಹೆಚ್ಚುವರಿ ಬಿಎಂಟಿಸಿ ಬಸ್ ಸೇವೆ ಆರಂಭಿಸಲಾಗಿದೆ.
ಹೌದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರಿಗೆ ಬಿಎಂಟಿಸಿ 100ಕ್ಕೂ ಹೆಚ್ಚು ಬಸ್ ಸೇವೆಯನ್ನು ಆರಂಭಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಗಳ ಜತೆಗೆ ಬಿಎಂಟಿಸಿ ಬಸ್ ಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿವೆ. ಅ.22ರಿಂದ 24ರವರೆಗೆ ವಾರಾಂತ್ಯ ಮತ್ತು ದಸರಾ ಹಬ್ಬದ ಪ್ರಯುಕ್ತ ರಜೆಯಿದೆ. ಹೀಗಾಗಿ ಶುಕ್ರವಾರ ರಾತ್ರಿಯಿಂದಲೇ ಹೆಚ್ಚಿನ ಜನರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ಕೆಎಸ್ ಆರ್ ಟಿಸಿ ಬಸ್ ಗಳ ಜತೆಗೆ ಬಿಎಂಟಿಸಿಯ 100ಕ್ಕೂ ಹೆಚ್ಚಿನ ಬಸ್ ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಿದೆ.
ಪ್ರಮುಖವಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾಸನ, ಬಳ್ಳಾರಿ, ಮೈಸೂರು, ಧರ್ಮಸ್ಥಳ, ತುಮಕೂರು ಸೇರಿ ದಂತೆ ಮತ್ತಿತರ ಜಿಲ್ಲೆಗಳಿಗೆ ಬಿಎಂಟಿಸಿ ವೋಲ್ಲೋ ಸೇರಿ ಇನಿತರ ಬಸ್ ಗಳು ಸಂಚರಿಸಿದೆ.