ಬೆಂಗಳೂರು : ಸಮುದಾಯ ಆರೋಗ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವೇತನ ಶೇ.5ಷ್ಟು ಹೆಚ್ಚಳ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಮುದಾಯ ಆರೋಗ್ಯಾಧಿಕಾರಿಗಳ ವೇತನವನ್ನು ವಾರ್ಷಿಕ ಶೇ 5 ರಷ್ಟು ಹೆಚ್ಚಳ ಮಾಡಲು ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿ ಇತರೆ ಆರೋಗ್ಯ ಅಧಿಕಾರಿಗಳಿಗೆ ಶೇ.5 ರಷ್ಟು ವೇತನ ಹೆಚ್ಚಳ ಹೆಚ್ಚಳ ಮಾಡಿದ್ದು, ತಮಗೂ ಹೆಚ್ಚಳ ಮಾಡಿ ಎಂದು ಸಮುದಾಯ ಆರೋಗ್ಯಾಧಿಕಾರಿಗಳು ಮನವಿ ಸಲ್ಲಿಸಿ ದ್ದರು. ಈ ಹಿನ್ನೆಲೆ 2023 ಹಾಗೂ 2024 ರ ಸಾಲಿನ ಎರಡು ವರ್ಷಗಳ ವಾರ್ಷಿಕ ವೇತನ ಶೇ.5 ರಷ್ಟು ಹೆಚ್ಚಳ ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.