ಬೆಂಗಳೂರು : ಟೊಮೆಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಟೊಮೆಟೊ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ರಾಜ್ಯದಲ್ಲಿ ಗಗನಕ್ಕೇರಿದ್ದ ಟೊಮೆಟೊ ಬೆಲೆ ಇದೀಗ ಇಳಿಕೆಯತ್ತ ಮುಖಮಾಡಿದ್ದು, ಕೆಜಿ ಟೊಮೆಟೊ ಬೆಲೆ 80 ರೂ. ಸನಿಹಕ್ಕೆ ಬಂದಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ.
ಮುಕ್ತ ಮಾರುಕಟ್ಟೆಯಲ್ಲಿ 100 ರೂ. ಇದ್ದು, ಚಿಲ್ಲರೆಯಾಗಿ 150-200 ರೂ.ವರೆಗೆ ಮಾರಾಟವಾಗಿ ದಾಖಲೆ ಬರೆದಿದ್ದ ಟೊಮೆಟೊ ಬೆಲೆ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಶನಿವಾರ ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲಿ ಪ್ರತಿ ಕೆಜಿಗೆ ಟೊಮೆಟೊಗೆ 100 ರೂ.ಗಿಂತ ಕಡಿಮೆ ಆಗಿದೆ. ಮಾನ್ಸೂನ್ ಮಳೆ ಮತ್ತು ಇತರ ಸಮಸ್ಯೆಗಳಿಂದ ಪೂರೈಕೆ ಸರಪಳಿಯು ಸ್ಥಗಿತಗೊಂಡಿದ್ದರಿಂದ ದೇಶದ ಹಲವಾರು ಭಾಗಗಳಲ್ಲಿ ಚಿಲ್ಲರೆ ಬೆಲೆಗಳು ಕಿಲೋಗ್ರಾಂಗೆ 200-250 ರೂ.ವರೆಗೂ ತಲುಪಿತ್ತು.