ಉಡುಪಿ : ಕರಾವಳಿ ಭಾಗದ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಹಾಕುಂಭಮೇಳಕ್ಕೆ ತೆರಳಲು ವಿಶೇಷ ರೈಲು ಸೇವೆ ಆರಂಭಿಸಲಾಗಿದೆ.
ಈ ಬಗ್ಗೆ ಸಚಿವ ವಿ.ಸೋಮಣ್ಣ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.ಜಗದ್ವಿಖ್ಯಾತ ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಲಿಚ್ಛಿಸುವ ಕರಾವಳಿಯ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ. ಫೆಬ್ರವರಿ 17 ಕ್ಕೆ ಉಡುಪಿಯಿಂದ ಪ್ರಯಾಗರಾಜ್ಗೆ ರೈಲು ಸಂಖ್ಯೆ. 01192 ಹಾಗೂ ಫೆಬ್ರವರಿ 20 ರಂದು ಪ್ರಯಾಗರಾಜ್ನಿಂದ ಉಡುಪಿಗೆ ರೈಲು ಸಂಖ್ಯೆ 01191 ವಿಶೇಷ ರೈಲುಗಳು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಜಗದ್ವಿಖ್ಯಾತ ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ತೆರಳಲಿಚ್ಛಿಸುವ ಕರಾವಳಿಯ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ.
ಫೆಬ್ರವರಿ 17 ಕ್ಕೆ ಉಡುಪಿಯಿಂದ ಪ್ರಯಾಗರಾಜ್ಗೆ ರೈಲು ಸಂಖ್ಯೆ. 01192 ಹಾಗೂ ಫೆಬ್ರವರಿ 20 ರಂದು ಪ್ರಯಾಗರಾಜ್ನಿಂದ ಉಡುಪಿಗೆ ರೈಲು ಸಂಖ್ಯೆ 01191 ವಿಶೇಷ ರೈಲುಗಳು ಚಲಿಸಲಿದ್ದು, ಯಾತ್ರಾರ್ಥಿಗಳು ಈ ಸೇವೆಯ… pic.twitter.com/2KZ3EvIx1M
— V. Somanna (@VSOMANNA_BJP) February 14, 2025