alex Certify ರಾಜ್ಯ ಸಾರಿಗೆ ಸಿಬ್ಬಂದಿ ಮಕ್ಕಳಿಗೆ ಗುಡ್ ನ್ಯೂಸ್ : `ವಿದ್ಯಾಚೇತನ ಯೋಜನೆ’ ಯಡಿ ವಿದ್ಯಾರ್ಥಿವೇತನ 5 ಪಟ್ಟು ಹೆಚ್ಚಳ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸಾರಿಗೆ ಸಿಬ್ಬಂದಿ ಮಕ್ಕಳಿಗೆ ಗುಡ್ ನ್ಯೂಸ್ : `ವಿದ್ಯಾಚೇತನ ಯೋಜನೆ’ ಯಡಿ ವಿದ್ಯಾರ್ಥಿವೇತನ 5 ಪಟ್ಟು ಹೆಚ್ಚಳ!

ಬೆಂಗಳೂರು : ರಾಜ್ಯ ಸಾರಿಗೆ ಸಿಬ್ಬಂದಿ ಮಕ್ಕಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿದ್ಯಾಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು 4-5 ಪಟ್ಟು ಹೆಚ್ಚಳ ಮಾಡಲಾಗಿದ್ದು, ನಾಲ್ಕು ಕಲಿಕಾ ವಿಭಾಗಗಳನ್ನೂ ಸೇರ್ಪಡೆ ಮಾಡಲಾಗಿದೆ.

ಈ ಕುರಿತು ರಾಜ್ಯ ಸರ್ಕಾರವು ಮಾಹಿತಿ ನೀಡಿದ್ದು, ರಾಜ್ಯ ಸಾರಿಗೆ ಸಿಬ್ಬಂದಿಗಳ ಮಕ್ಕಳಿಗೆ ನೀಡುವ ವಿದ್ಯಾಚೇತನ ಯೋಜನೆಯಡಿ ನೀಡಲಾಗುತ್ತಿರುವ ವಿದ್ಯಾರ್ಥಿವೇತನವನ್ನು 4-5 ಪಟ್ಟು ಹೆಚ್ಚಳ ಮಾಡಲಾಗಿದ್ದು, ನಾಲ್ಕು ಕಲಿಕಾ ವಿಭಾಗಗಳ ಸೇರ್ಪಡೆ ಮಾಡಲಾಗಿದೆ.

ಇಲ್ಲಿದೆ ಪರಿಸ್ಕೃತ ಪ್ರೋತ್ಸಾಹ ದರ

ಡಿಪ್ಲೋಮಾ- 9,00 ರೂ.ನಿಂದ 5,000 ರೂ.ಕ್ಕೆ ಏರಿಕೆ

ಬಿಇ,ಬಿಎಸ್ ಸಿ-800 ರೂ.ಗಳಿಂದ, 5000 ರೂ.ಗೆ ಏರಿಕೆ

ವೈದ್ಯಕೀಯ ಪದವಿ-10,500 ರೂ.ಗಳಿಂದ 33,750 ರೂ.ಗೆ ಏರಿಕೆ

ಸ್ನಾತಕೋತ್ತರ ಪದವಿ (2 ವರ್ಷ) 3,600 ರೂ.ನಿಂದ 14,000 ರೂ.ಗೆ ಏರಿಕೆ

ಸ್ನಾತಕೋತ್ತರ ಪದವಿ (3 ವರ್ಷ) -5,400 ರೂ.ನಿಂದ 21,000 ರೂ.ವರೆಗೆ ಏರಿಕೆ ಮಾಡಲಾಗಿದೆ.

ಹೊಸ ವಿಭಾಗ

ಪಿಯುಸಿ- 4,000ರೂ.

ಬಿಎ.ಬಿಕಾಂ-5,000 ರೂ.

ಪಿಎಚ್ ಡಿ-25,000 ರೂ.

ವಿದೇಶ ವ್ಯಾಸಂಗ-25,000 ರೂ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...