
ಹಬ್ಬದ ಸಂದರ್ಭದಲ್ಲಿ ಸ್ಕೂಟರ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ದೇಶದ ದ್ವಿಚಕ್ರ ವಾಹನಗಳ ಪ್ರಮುಖ ತಯಾರಕರಾದ ಬಜಾಜ್ ಆಟೋ ಕಂಪನಿ, ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ವಿಶೇಷ ಕೊಡುಗೆ ಘೋಷಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಗ್ರಾಹಕರಿಗೆ ಈ ಆಫರ್ ಲಭ್ಯವಿದ್ದು, ವಿಶೇಷ ಬೆಲೆ 1,15,000 ರೂಪಾಯಿಗಳಿಗೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದಾಗಿದೆ. ಈ ಆಫರ್ ಸ್ಟಾಕ್ ಇರುವವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಐಪಿ 67 ರೇಟೆಡ್ ವಾಟರ್ ರೆಸಿಸ್ಟೆಂಟ್ ವರ್ಗಿಕರಣದೊಂದಿಗೆ ಹವಾಮಾನಕ್ಕೆ ಸೂಕ್ತವಾಗಿ ಸುರಕ್ಷಿತ ಸವಾರಿ ಖಾತ್ರಿಪಡಿಸುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅಮೆಜಾನ್ ನಲ್ಲಿಯೂ ಸಹ ಲಭ್ಯವಿದೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ www.chetak.com ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.