ವಾಷಿಂಗ್ಟನ್: ರಕ್ತದ ಕ್ಯಾನ್ಸರ್ ರೋಗಿಗಳಿಗೆ ಅಭಿವೃದ್ಧಿಪಡಿಸಿದ ಪ್ರತಿಕಾಯ ಆಧಾರಿತ ಚಿಕಿತ್ಸೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅನುಮೋದನೆ ನೀಡಿದೆ ಎಂದು ಜಾನ್ಸನ್ & ಜಾನ್ಸನ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಕಂಪನಿಯು ತಯಾರಿಸಿದ ‘ಟಾಲ್ವಿ’ ಚುಚ್ಚುಮದ್ದನ್ನು ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ರೋಗಿಗಳಿಗೆ ನೀಡುವುದರಿಂದ ರೋಗಿಯ ದೇಹದಲ್ಲಿ ಪ್ರತಿಕಾಯಗಳು ರೂಪುಗೊಳ್ಳಬಹುದು ಮತ್ತು ಈ ಚಿಕಿತ್ಸೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶವನ್ನು ಕೊನೆಗೊಳಿಸುತ್ತದೆ. ರಕ್ತದ ಕ್ಯಾನ್ಸರ್ ರೋಗಿಗಳಲ್ಲಿ ‘ಟಾಲ್ವಿ’ ಚುಚ್ಚುಮದ್ದಿನ ಮೂಲಕ ನೀಡಲಾಗುವ ಚಿಕಿತ್ಸೆಗೆ ಯುಎಸ್ ಎಫ್ಡಿಎಯಿಂದ ಅನುಮೋದನೆ ಸಿಕ್ಕಿದೆ ಎಂದು ಕಂಪನಿ ಹೇಳಿದೆ.