
ಬೆಂಗಳೂರು : ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ನಿಗಧಿತ ಅವಧಿಯೊಳಗೆ ಯೋಜನೆ ಹಣ ಖಾತೆಗೆ ಜಮಾ ಆಗಲಿದೆ.
ಸರ್ಕಾರದ ಫಲಾನುಭವಿ ಆಧಾರಿತ ಯೋಜನೆಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು, ಪ್ರತಿ ಮಾಸಿಕದ ಕೊನೆಯಲ್ಲಿ ಖಜಾನೆಗಳಲ್ಲಿ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸಲು ಮತ್ತು ಹಣ ಸಂದಾಯ ಮಾಡುವುದಕ್ಕೆ ವ್ಯವಸ್ಥೆ ಮಾಡುವ ಪೂರ್ವದಲ್ಲಿ, ಖಜಾನಗಳಲ್ಲಿ ಬಿಲ್ಲುಗಳನ್ನು ಪರಿಶೋಧನೆ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ಈ ಕೆಳಕಂಡ ಯೋಜನೆಗಳಿಗೆ ಸಂಬಂಧಪಟ್ಟ ಹಣ ಸೆಳೆಯುವ ಮತ್ತು ಬಟವಾಡ ಮಾಡುವ ಅಧಿಕಾರಿಗಳು ಈ ಕೆಳಕಂಡಂತ ನಮೂದಿಸಿರುವ ವೇಳಾಪಟ್ಟಿಯನ್ವಯ ನಿಗಧಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಖಜಾನಗಳಿಗೆ ಬಿಲ್ಲು ಸಲ್ಲಿಸಿ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸುವಂತ ತಿಳಿಸಲಾಗಿದೆ.
ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಪಾವತಿ ಮಾಡಲು ಮತ್ತು ಡಿ.ಡಿ.ಓ, ಡಿ.ಬಿ.ಟಿ ಸಲ್ ಮತ್ತು ಖಜಾನೆಗಳಿಗೆ ಯಾವುದಾದರೂ ತಾಂತ್ರಿಕ /ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲು ಮತ್ತು ಪ್ರತಿ ಹಂತದಲ್ಲೂ ಸಮನ್ವಯೀಕರಣ ಸುಲಭಗೊಳಿಸಲು ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವ, ಮಾಸಿಕವಾಗಿ ಪಾವತಿಸುವ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮತ್ತ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಂತ ಹಂತವಾಗಿ ಪಾವತಿ ಮಾಡಲು ವೇಳಾಪಟ್ಟಿಯೊಂದಿಗೆ ನಿರ್ಧಿಷ್ಟ ವೇಳೆಯೊಳಗೆ ಸೂಚಿಸಲು ಕೋರಲಾಗಿದೆ.
ಸರ್ಕಾರದ ಸುತ್ತೋಲೆ ಸಂ:ಆಇ 37 ಟಿಎಅರ್ 2021, ದಿ:26.07.2021 ರಲ್ಲಿ ಎಲ್ಲಾ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಸಿ.ಆ.ಸು. (ಇ-ಆಡಳಿತ) ಇಲಾಖೆಯೊಂದಿಗೆ ಸರ್ಕಾರದ ಏಕೀಕೃತ ನೇರ ನಗದು ವರ್ಗಾವಣೆ ವೇದಿಕ (DBT Platform) ಮೂಲಕ ಅನುಷ್ಠಾನಗೊಳಿಸಲು ತಿಳಿಸಲಾಗಿದೆ.
ಖಜಾನೆ ಆಯುಕ್ತರ ಪ್ರಸ್ತಾವನೆಯಲ್ಲಿ, ಸರ್ಕಾರದ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಹಾಗೂ ಸಬ್ಸಿಡಿ ಸ್ಟ್ರೀಂಗಳ ಪಾವತಿಗಳನ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆ (Direct Benefit Transfer) ಮುಖಾಂತರ ಫಲಾನುಭವಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮತ್ತು ಖಜಾನೆ-2 ರ ಮೂಲಕ ಹಣವನ್ನು ಯಾವುದೇ ಅಡೆ ತಡೆಗಳಿಲ್ಲದೇ ಪಾವತಿಸಲಾಗುತ್ತಿದೆ ಎಂದು ತಿಳಿಸಿರುತ್ತಾರೆ.