ಬೆಂಗಳೂರು : 2024 ಏಪ್ರಿಲ್ ಅಂತ್ಯದೊಳಗೆ 1600 ಎಲೆಕ್ಟ್ರಿಕ್ ಬಸ್ ಗಳನ್ನು ನಗರ ಸಾರಿಗೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
2024 ಏಪ್ರಿಲ್ ಅಂತ್ಯದೊಳಗೆ ನಗರ ಸಾರಿಗೆಗೆ 1600 ಎಲೆಕ್ಟ್ರಿಕ್ ಬಸ್ʼಗಳನ್ನು ಸೇರ್ಪಡೆಗೊಳಿಸುವ ಮೂಲಕ ಹೊಗೆ ರಹಿತ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಡಿಯಿಟ್ಟಿದೆ. ಆರೋಗ್ಯಯುತ ಸಮಾಜವೇ ಅಭಿವೃದ್ಧಿಯ ಭದ್ರ ಅಡಿಪಾಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.