ಬೆಂಗಳೂರು : ಬೆಂಗಳೂರಿನ 18 ಕಡೆ ಒಟ್ಟು 100 ಕಿ.ಮೀ. ಉದ್ದದ ಸಿಗ್ನಲ್ ಮುಕ್ತ ಕಾರಿಡಾರ್ (ಮೇಲ್ಸೇತುವೆ) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರಿನ 18 ಕಡೆ ಒಟ್ಟು 100 ಕಿ.ಮೀ. ಉದ್ದದ ಸಿಗ್ನಲ್ ಮುಕ್ತ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸುಮಾರು 12,000 ಕೋಟಿ ವೆಚ್ಚವಾಗಬಹುದು” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.