ಬೆಂಗಳೂರು : ಈ ವರ್ಷಾಂತ್ಯದ ಒಳಗೆ ಬಿಎಂಟಿಸಿ ಒಟ್ಟು 1,900 ಹೊಸ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಈ ವರ್ಷದ ಅಂತ್ಯದೊಳಗೆ ಬಿಎಂಟಿಸಿ ಒಟ್ಟು 1,900 ಹೊಸ ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ ಈ ಪೈಕಿ 921 ಬಸ್ಗಳು ಎಲೆಕ್ಟ್ರಿಕ್ ಬಸ್ಗಳಾಗಿವೆ. 820 ಡೀಸೆಲ್ ಬಸ್ಗಳು ಇದರಲ್ಲೇ ಸೇರಿವೆ. ಇದನ್ನು ರಾಜ್ಯ ಸರ್ಕಾರದ ಹಣದಲ್ಲೇ ಖರೀದಿಸಲಾಗುವುದು ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿಟಿ ಪ್ರಭಾಕರ ರೆಡ್ಡಿ ತಿಳಿಸಿದ್ದು, ಟಾಟಾ ಮೋಟಾರ್ಸ್ನಿಂದ 20 ಬಸ್ಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.