ಬೆಂಗಳೂರು: ಕೇಂದ್ರ ಸರ್ಕಾರದ ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಯಡಿ ಈ ಕೆಳಕಂಡ ಕುಶಲಕರ್ಮಿಗಳು ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಬರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದು.
ಕುಶಲಕರ್ಮಿಗಳಾದ ಬಡಗಿ/ಮರಗೆಲಸ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಿಗ ವೃತ್ತಿ ಮಾಡುವವರು,ಚಾಪೆ-ಕಸ ಪೆÇರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು (ಸಾಂಪ್ರದಾಯಿಕ),ಕ್ಷೌರಿಕ ವೃತ್ತಿ ಮಾಡುವವರು, 9.ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಅಗಸರು (ದೋಬಿ), ಆಭರಣ ತಯಾರಕರು, ಶಿಂಪಿಗ(ಬಟ್ಟೆ ಹೊಲೆಯುವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ), ಚಮ್ಮಾರ ಪಾದರಕ್ಷೆ ತಯಾರಕರು, ಬೀಗ ತಯಾರಕರು, ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಕುಶಲಕರ್ಮಿಗಳು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಣೆ, ಕೌಶಲ್ಯ ವರ್ಧನೆಗೆ ತರಬೇತಿ ಮತ್ತು ಶಿಷ್ಯ ವೇತನ ನೀಡಲಾಗುವುದು. ಉಪಕರಣಗಳ ಕಿಟ್(ಟೂಲ್ ಕಿಟ್ ಇನ್ಸೆಂಟಿವ್)ಗೆ ಪೆÇ್ರೀತ್ಸಾಹ. ಮೊದಲ ಹಂತದಲ್ಲಿ 1.ಲಕ್ಷ, 2ನೇ ಹಂತದಲ್ಲಿ 2 ಲಕ್ಷದವರೆಗಿನ ಸಾಲವನ್ನು ಬ್ಯಾಂಕಿನ ಮೂಲಕ ಕೇವಲ ಶೇಕಡ 5ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಡಿಜಿಟಲ್ ವಹಿವಾಟಿಗೆ ಸಹಾಯಧನ. ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲ ಸೌಲಭ್ಯಗಳನ್ನು ನೀಡಲಾಗುವುದು.