ಬೆಂಗಳೂರು : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಆಗಸ್ಟ್ ನಲ್ಲಿ 25 ಲಕ್ಷ ಜನರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ಖಾತೆಗೆ ಮಾಡಲಾಗುತ್ತಿದೆ.
ರಾಜ್ಯಾದ್ಯಂತ 1.03 ಕೋಟಿ ಕಾರ್ಡ್ ಗಳ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಸಂದಾಯವಾಗಲಿದ್ದು, ಜುಲೈ ತಿಂಗಳಲ್ಲಿ 97.27 ಲಕ್ಷ ಕುಟುಂಬಗಳ 3. 45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಸಂದಾಯ ಮಾಡಲಾಗಿತ್ತು.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಪಡಿತರ ಚೀಟಿ ಇ-ಕೆವೈಸಿ ಮಾಡಿಸದಿರುವುದು ಹಾಗೂ ಕುಟುಂಬದ ಯಜಮಾನಿಯ ಆಯ್ಕೆ ಸಮಸ್ಯೆ ಇತ್ಯಾದಿ ಕಾರಣಗಳಿಂದಾಗಿ ಜುಲೈ ತಿಂಗಳಲ್ಲಿ ಸುಮಾರು 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಾಭ ಸಿಕ್ಕಿರಲಿಲ್ಲ. ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿಯಾಗಿ 7 ಲಕ್ಷ ಕುಟುಂಬಗಳ 25 ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ನಭಾಗ್ಯ ಯೋಜನೆಯ ಲಾಭ ಸಿಗಲಿದೆ
.