ಬೆಂಗಳೂರು : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದ ಹಣ ಜಮಾ ಮಾಡಲು ನಿರ್ಧರಿಸಿದೆ.
ಹೌದು, ರಾಜ್ಯ ಸರ್ಕಾರವು ಮನೆಯ 2 ನೇ ಯಜಮಾನರ ಖಾತೆಗೆ ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆ ಹಣವನ್ನು ಖಾತೆಗೆ ಜಮಾ ಮಾಡಲಿದೆ. ಫಲಾನುಭವಿಗಳು ತಪ್ಪದೇ ಎಲ್ಲಾ ದಾಖಲೆಗಳು ಸರಿಯಾಗಿದೆಯಾ ಎಂದು ಪರಿಶೀಲಿಸಿಕೊಳ್ಳಬೇಕು.
ರಾಜ್ಯದಲ್ಲಿ ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ಹಣ ಖಾತೆಗೆ ಜಮಾ ಆಗಿಲ್ಲ. ಈ ಫಲಾನುಭವಿಗಳ ರೇಷನ್ ಕಾರ್ಡ್ ಮನೆಯ ಹಿರಿಯ ಸದಸ್ಯರ ಅಕೌಂಟ್ ನಿಷ್ಕ್ರಿಯ ಆಧಾರ್ ಸೀಡಿಂಗ್ ಸಮಸ್ಯೆ, ಕೆವೈಸಿ ಸಮಸ್ಯೆ ಇತ್ತು. ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆಹಾಕಿದೆ. ಈ ತಿಂಗಳಿನಿಂದಲೇ ಡಿಬಿಟಿ ಮೂಲಕ ಮನೆಯ 2 ನೇ ಯಜಮಾನರ ಖಾತೆಗೆ ಹಣ ಪಾವತಿಯಾಗಲಿದೆ.
ಬಿಪಿಎಲ್ ಕಾರ್ಡ್ ದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್ ನ 2 ನೇ ಯಜಮಾನರ ಅಕೌಂಟ್ ಗೆ ಹಣ ಜಮಾ ಆಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ.