ಬೆಂಗಳೂರು : ಪ್ರಾಣಿಪ್ರಿಯರಿಗೆ ಗುಡ್ ನ್ಯೂಸ್ ಅಂದರೆ ರಾಜ್ಯದಲ್ಲಿ ಮತ್ತೊಂದು ವನ್ಯಜೀವಿ ‘ಸಫಾರಿ’ ಆರಂಭವಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಸಫಾರಿ ಕೇಂದ್ರ ಆರಂಭವಾಗಿದ್ದು, ಇಂದು ಬೆಳಗ್ಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸಫಾರಿಗೆ ಚಾಲನೆ ನೀಡಿದ್ದಾರೆ. ನಂತರ ಮಾತನಾಡಿದ ಅವರು ಪ್ರವಾಸಿಗರು ಇದರ ಸದುಪಯೋಗಪಡಿಸಿಕೊಂಡು ಪರಿಸರವನ್ನು ಕಣ್ತುಂಬಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನೂ, ಸಫಾರಿ ದರ ಎಷ್ಟು ಎಂಬ ಮಾಹಿತಿ ನೋಡುವುದಾದರೆ ಪ್ರವಾಸಿಗರಿಗೆ ವಾಹನ ಶುಲ್ಕವಾಗಿ 100 ರೂ. ವಯಸ್ಕರಿಗೆ ತಲಾ 400 ಹಾಗೂ ಮಕ್ಕಳಿಗೆ 200 ರೂ. ದರವನ್ನು ನಿಗದಿ ಪಡಿಸಲಾಗಿದೆ. ಬೆಳಗ್ಗೆ 6 ರಿಂದ 9 ಗಂಟೆ ಮಧ್ಯಾಹ್ನ 3 ರಿಂದ 6ರವರೆಗೆ ಸಫಾರಿಗೆ ಅವಕಾಶ ಇರಲಿದೆ.
ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗಾಗಲೇ ಬಂಡೀಪುರ, ಕೆ.ಗುಡಿ, ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿ ಇದ್ದು, ಇಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ.