ಬೆಂಗಳೂರು: ಬೆಂಗಳೂರು ರಾಜ್ಯದ ಅನೇಕ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಶುಚಿತ್ವ ಇಲ್ಲದಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂಡ ಆಹಾರ ಸುರಕ್ಷತೆ ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಆರೋಗ್ಯ ಇಲಾಖೆಯಿಂದ ಆಹಾರ ಪರೀಕ್ಷಾ ಕಿಟ್ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಈ ಕುರಿತಾಗಿ ಸಭೆ ನಡೆಸಿದ್ದಾರೆ.
ಅತಿ ಹೆಚ್ಚು ಹೋಟೆಲ್, ರೆಸ್ಟೋರೆಂಟ್ ಇರುವ ಸ್ಥಳಗಳಲ್ಲಿ ಇಲಾಖೆಯಿಂದಲೇ ಆಹಾರ ಪರೀಕ್ಷೆ ಕಿಟ್ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಹೋಟೆಲ್ ನವರು ಸಹ ತಮ್ಮ ಆಹಾರದ ಗುಣಮಟ್ಟದ ಪರೀಕ್ಷೆಗೆ ಅನುಕೂಲವಾಗುತ್ತದೆ ಎಂದಿದ್ದಾರೆ. ಹೋಟೆಲ್ ಆಹಾರ ಪರೀಕ್ಷಿಸಲು ಸರ್ಕಾರದಿಂದ ಕಿಟ್ ಪೂರೈಕೆ ಬಗ್ಗೆ ಮಾಲೀಕರು ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.