ಚಿಕ್ಕಮಗಳೂರು : ಮಲೆನಾಡಿನ ಕಾಫಿ ಪ್ಲಾಂಟರ್ಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ನೀಡಿದ್ದು, ಕಾಫಿ ಪ್ಲಾಂಟೇಷನ್ ಲೀಸ್ ಮೇಲೆ ನೀಡುವ ಕುರಿತು ನಮ್ಮ ಸರ್ಕಾರ ಕಾಫಿ ಬೆಳೆಗಾರರ ಪರವಾಗಿ ತೀರ್ಮಾನ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಚಿಕ್ಕಮಗಳೂರಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ನಾನಾ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮಲೆನಾಡ ಭಾಗದಲ್ಲಿ ಕಾಫಿ ಪ್ಲಾಂಟರ್ಸ್ ಗಳ ಬಹುದಿನಗಳ ಬೇಡಿಕೆಯಾಗಿದ್ದ ಕಾಫಿ ಪ್ಲಾಂಟೇಷನ್ ಲೀಸ್ ಮೇಲೆ ನೀಡುವ ಕುರಿತು ನಮ್ಮ ಸರ್ಕಾರ ಕಾಫಿ ಬೆಳೆಗಾರರ ಪರವಾಗಿ ತೀರ್ಮಾನ ಕೈಗೊಂಡಿದೆ. ಶೀರ್ಘದಲ್ಲಿ ಈ ಕುರಿತು ಅರ್ಜಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳಲಿದ್ದೇವೆ. ಇದರಿಂದ ಕಾಫಿ ಬೆಳೆಗಾರ ಸಮುದಾಯಕ್ಕೆ ಮತ್ತು ಅವಲಂಬಿತ ಜನರಿಗೆ ಅನುಕೂಲ ಆಗಲಿದೆ ಎಂದರು.
ಅಭಿವೃದ್ಧಿ ಶೂನ್ಯ ಬಿಜೆಪಿ, ಸುಳ್ಳುಗಳ ಉತ್ಪಾದನೆ ಮಾಡುತ್ತಿದೆ. ಸುಳ್ಳುಗಳ ಆಧಾರದಲ್ಲೇ ದೇಶವನ್ನು ಆಳುವ ಸರ್ಕಸ್ ಮಾಡುತ್ತಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.