ಇಪಿಎಫ್ಒ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಇಪಿಎಫ್‌ಒ 2020-21ನೇ ಹಣಕಾಸು ವರ್ಷದ ಬಡ್ಡಿಯನ್ನು ಗ್ರಾಹಕರ ಖಾತೆಗೆ ಜಮಾ ಮಾಡಲು ಶುರು ಮಾಡಿದೆ. ದೇಶದ ಸುಮಾರು 6.5 ಕೋಟಿ ಗ್ರಾಹಕರ ಖಾತೆಗೆ ಬಡ್ಡಿ ಹಣ ಜಮಾ ಆಗಲಿದೆ.
ಮಾನವ ಮೂಳೆಗಳನ್ನು ಮಾರಾಟ ಮಾಡ್ತಾನೆ ಈ ಟಿಕ್ ಟಾಕರ್..!
ಇನ್ನೂ ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ನಿಮ್ಮ ಖಾತೆಗೆ ಬಡ್ಡಿ ಹಣ ಬರಲಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯಾ ಇಲ್ವಾ ಎಂಬುದನ್ನು ಒಂದು ಮಿಸ್ಡ್ ಕಾಲ್ ಮೂಲಕ ನೀವು ಪತ್ತೆ ಮಾಡಬಹುದು. ಪಿಎಫ್ ಖಾತೆಗೆ ನೋಂದಾಯಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆಯಿಂದ 011 22901406 ಗೆ ಮಿಸ್ಡ್ ಕಾಲ್ ನೀಡಬೇಕು.
ಮಿಸ್ಡ್ ಕಾಲ್ ನಂತ್ರ ಇಪಿಎಫ್ಒ ಸಂದೇಶ ಬರಲಿದೆ. ಅದ್ರಲ್ಲಿ ಪಿಎಫ್ ಖಾತೆಯ ವಿವರ ಇರಲಿದೆ. ಮಿಸ್ಡ್ ಕಾಲ್ ಮೂಲಕ, ಪಿಎಫ್ ಖಾತೆ ಬ್ಯಾಲೆನ್ಸ್ ತಿಳಿಯಬೇಕೆಂದ್ರೆ ನೀವು, ಬ್ಯಾಂಕ್ ಖಾತೆ, ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಯುಎಎನ್ ಜೊತೆ ಲಿಂಕ್ ಮಾಡಿರಬೇಕು.
BIG NEWS: ಉತ್ತರಾಖಂಡ ಜಲಪ್ರಳಯದಲ್ಲಿ ಸಿಲುಕಿರುವ ಕನ್ನಡಿಗರು; ಊರಿಗೆ ಬರಲಾಗದೇ ಪರದಾಟ; ಸರ್ಕಾರದಿಂದ ಸಹಾಯವಾಣಿ ಆರಂಭ
ಎಸ್ಎಂಎಸ್ ಮೂಲಕವೂ ನೀವು ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಇದಕ್ಕಾಗಿ EPFOHO UAN ENG ಅನ್ನು 7738299899 ಗೆ ಕಳುಹಿಸಬೇಕು. ಕೊನೆಯ ಮೂರು ಅಕ್ಷರಗಳು ಭಾಷೆ ಸಂಬಂಧಿಸಿದ್ದಾಗಿದೆ. ಇಂಗ್ಲೀಷ್ ನಲ್ಲಿ ಬೇಕಾದ್ರೆ ENG ಎಂದು ಹಾಕಬೇಕು. ಇಂಗ್ಲಿಷ್, ಪಂಜಾಬಿ, ಮರಾಠಿ, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಿದೆ. ಇಪಿಎಫ್ಒ ವೆಬ್ಸೈಟ್ ಮೂಲಕವೂ ನೀವು ಖಾತೆ ವಿವರ ಪಡೆಯಬಹುದು.