ವಾಹನ ಸವಾರರು ಡ್ರೈವಿಂಗ್ ಲೈಸನ್ಸ್ ಅನ್ನು ಜೊತೆಯಲ್ಲೇ ಇಟ್ಟಕೊಳ್ಳಬೇಕಾದ ಅಗತ್ಯವಿಲ್ಲ. ಬದಲಾಗಿ ಈ ದಾಖಲೆಗಳನ್ನು mParivahan ಮೊಬೈಲ್ ಅಪ್ಲಿಕೇಶನ್ನಲ್ಲಿ ಸಂಗ್ರಹಿಸಿಡಬಹುದು. ಕೇಳಿದಾಗ ಅದನ್ನೇ ಅಧಿಕಾರಿಗಳಿಗೆ ಕೊಡಬಹುದು.
1989ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರೋ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಆರ್ ಸಿ ಪುಸ್ತಕವನ್ನು ಕೂಡ ಕೈಯ್ಯಲ್ಲಿಟ್ಟುಕೊಂಡೇ ಹೋಗಬೇಕಾದ ಅಗತ್ಯವಿಲ್ಲವೆಂದು ಹೇಳಿದೆ. ಅಪ್ಲಿಕೇಶನ್ ನಲ್ಲೇ ಬೇಕಾದ ಮಾಹಿತಿ ಇರುವುದರಿಂದ ಇದು ವಾಹನ ಸವಾರರಿಗೂ ಅನುಕೂಲ ಮಾಡಿಕೊಡಲಿದೆ.
mParivahan ಆಪ್ ನಲ್ಲಿ ನಿಮ್ಮ ಚಾಲನಾ ಪರವಾನಗಿಯ ಮಾಹಿತಿಗಳನ್ನೆಲ್ಲ ಹಂತ ಹಂತವಾಗಿ ಆಡ್ ಮಾಡಬೇಕು.
ಮೊದಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ mParivahan ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
ನಿಮ್ಮ ಮೊಬೈಲ್ ನಂಬರ್ ಬಳಸಿ ಸೈನ್ ಅಪ್ ಆಗಿ. ನಿಮ್ಮ ಮೊಬೈಲ್ ಸಂಖ್ಯೆಗೊಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಿ.
ಈಗ ನಿಮಗೆ ಎರಡು ಆಯ್ಕೆಗಳಿರುತ್ತವೆ – ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್ ಸಿ.
ನಿಮ್ಮ ಡಿಎಲ್ ನಂಬರ್ ಅನ್ನು ನಮೂದಿಸಿ.
ವರ್ಚುವಲ್ ಡಿಎಲ್ ಸೃಷ್ಟಿಸಲು ಆಡ್ ಟು ಮೈ ಡ್ಯಾಶ್ ಬೋರ್ಡ್ ಮೇಲೆ ಕ್ಲಿಕ್ ಮಾಡಿ.
ಡಿಓಬಿಯನ್ನು ನಮೂದಿಸಿರೆ ನಿಮ್ಮ ಡಿಎಲ್ ಡ್ಯಾಶ್ ಬೋರ್ಡ್ ಗೆ ಆಡ್ ಆಗುತ್ತದೆ.
ನಿಮ್ಮ ವರ್ಚುವಲ್ ಡ್ರೈವಿಂಗ್ ಸೈಸನ್ಸ್ ಅನ್ನು ನೋಡಲು ಸ್ಕ್ರೀನ್ ನ ಮೇಲ್ಭಾಗದಲ್ಲಿರುವ ಡ್ಯಾಶ್ ಬೋರ್ಡ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಡಿಎಲ್ ಮಾಹಿತಿಯನ್ನು ಪೂರ್ಣಗೊಳಿಸಲು ಕ್ಯೂಆರ್ ಕೋಡ್ ಬರುತ್ತದೆ.
ಈ ಕ್ಯೂಆರ್ ಕೋಡ್ ಅನ್ನು ಅಧಿಕಾರಿಗಳು ಸ್ಕ್ಯಾನ್ ಮಾಡಿದರೆ ಅವರಿಗೆ ಬೇಕಾದ ದಾಖಲೆಗಳ ಮಾಹಿತಿ ಲಭ್ಯವಾಗುತ್ತದೆ.
ಇದೇ ಅಪ್ಲಿಕೇಶನ್ ನಲ್ಲಿ ಆರ್ ಸಿ ಬುಕ್ ನ ಮಾಹಿತಿಯನ್ನು ಕೂಡ ಆಡ್ ಮಾಡಬಹುದು. ನಿಮ್ಮ ಬಳಿ ಒಂದಕ್ಕಿಂದ ಹೆಚ್ಚು ವಾಹನಗಳಿದ್ದರೆ ಅವುಗಳ ಮಾಹಿತಿಯನ್ನೂ ಭರ್ತಿ ಮಾಡಲು ಅವಕಾಶವಿದೆ. ಪತ್ನಿಯ ಹೆಸರಿನಲ್ಲಿರೋ ವಾಹನವನ್ನು ಪತಿ ಓಡಿಸ್ತಾ ಇದ್ರೆ ಆ ವಿವರಗಳನ್ನು ಕೂಡ ದಾಖಲಿಸಬಹುದಾಗಿದೆ. ಒಂದಕ್ಕಿಂತ ಹೆಚ್ಚು ಮೊಬೈಲ್ ಡಿವೈಸ್ ಗಳಲ್ಲೂ ಇದನ್ನು ಪಡೆಯಲು ಅವಕಾಶವಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ mParivahan ಅಪ್ಲಿಕೇಶನ್ ಅನ್ನು ಸೃಷ್ಟಿಸಲಾಗಿದೆ. ವಾಹನ ಸವಾರರ ಮಾಹಿತಿ ಪರಿಶೀಲನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ನಲ್ಲಿ ಸಹ ಇದನ್ನು ಡೌನ್ಲೋಡ್ ಮಾಡಬಹುದು.