ಮಕ್ಕಳ ದಿನದಂದು ನಿಮ್ಮ ಮಗುವಿಗೆ ವಿಶೇಷ ಉಡುಗೊರೆ ಕೊಡಬೇಕೆಂದು ನೀವು ಬಯಸಿದ್ರೆ ಈ ಸುದ್ದಿಯನ್ನು ಓದ್ಲೇಬೇಕು. ಮಕ್ಕಳಿಗೆ ಹೇಳಿ ಮಾಡಿಸಿದಂತಹ ಅಂಚೆ ಕಛೇರಿಯ ಉಳಿತಾಯ ಯೋಜನೆಯೊಂದಿದೆ.
ಇದರಲ್ಲಿ ನೀವು ಒಮ್ಮೆ ಹಣವನ್ನು ಹೂಡಿಕೆ ಮಾಡಿದ್ರೆ, ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಲಾಭವನ್ನು ಪಡೆಯಬಹುದು. ಇದನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿಯೂ ತೆರೆಯಬಹುದು. ನಿಮ್ಮ ಮಕ್ಕಳ ಹೆಸರಿನಲ್ಲಿ ಈ ವಿಶೇಷ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆ ತೆರೆದರೆ ಅವರ ಶಾಲಾ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ.
ಖಾತೆಯನ್ನು ಎಲ್ಲಿ ಮತ್ತು ಹೇಗೆ ತೆರೆಯುವುದು ?
ನೀವು ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಕನಿಷ್ಠ 1000 ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಬಡ್ಡಿ ದರ ಶೇ.6.6ರಷ್ಟಿದೆ. ಮಗುವಿನ ವಯಸ್ಸು 10 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಅವರ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು.
ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆಯಿದ್ದರೆ, ನಂತರ ಪೋಷಕರು ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳು. ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿದ್ದರೆ ಮತ್ತು ನೀವು 2 ಲಕ್ಷ ರೂಪಾಯಿಯನ್ನು ಮಗುವಿಗ ಹೆಸರಲ್ಲಿ ಠೇವಣಿ ಮಾಡಿದರೆ, ಪ್ರತಿ ತಿಂಗಳು 1100 ರೂಪಾಯಿ ಬಡ್ಡಿ ದೊರೆಯುತ್ತದೆ. ಐದು ವರ್ಷಗಳಲ್ಲಿ ಈ ಬಡ್ಡಿಯ ಮೊತ್ತ ಒಟ್ಟು 66 ಸಾವಿರ ರೂಪಾಯಿ. ಕೊನೆಯದಾಗಿ ನೀವು 2 ಲಕ್ಷ ರೂಪಾಯಿ ರಿಟರ್ನ್ ಕೂಡ ಪಡೆಯುತ್ತೀರಿ.
ಬಡ್ಡಿ ಹಣವನ್ನು ಮಗುವಿನ ಶಿಕ್ಷಣಕ್ಕೆ ಬಳಸಬಹುದು. ಈ ಮೊತ್ತವು ಪೋಷಕರಿಗೆ ಸಹಾಯಕವಾಗುತ್ತದೆ. ಅದೇ ರೀತಿ ನೀವು 4.5 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಪ್ರತಿ ತಿಂಗಳು ಸುಮಾರು 2500 ರೂಪಾಯಿ ಬಡ್ಡಿ ದೊರೆಯುತ್ತದೆ. ಈ ಖಾತೆಯ ವಿಶೇಷತೆ ಏನೆಂದರೆ ಒಬ್ಬರು ಅಥವಾ ಮೂವರು ವಯಸ್ಕರೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ನೀವು 3.50 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದರೆ, ಪ್ರಸ್ತುತ ದರದಲ್ಲಿ ಪ್ರತಿ ತಿಂಗಳು 1925 ರೂಪಾಯಿ ಬಡ್ಡಿ ದೊರೆಯುತ್ತದೆ. ಈ ರೀತಿಯಾಗಿ ಮಗುವಿನ ಭವಿಷ್ಯವನ್ನು ಭದ್ರಪಡಿಸಬಹುದು.