ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿನ ಏರಿಳಿತದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. ಭಾರತದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಇಂದು 10 ಗ್ರಾಂಗೆ 50,301 ರೂಪಾಯಿ ಆಗಿತ್ತು. ಬೆಳ್ಳಿ ಬೆಲೆ ಕೆಜಿಗೆ 57 ಸಾವಿರ ರೂಪಾಯಿಗೆ ಬಂದು ತಲುಪಿದೆ. ಬೆಳ್ಳಿ ದರ ಕೆಜಿಗೆ 400 ರೂಪಾಯಿ ಇಳಿಕೆಯಾಗಿದೆ. ಬಂಗಾರದ ಬೆಲೆಯಲ್ಲಿ 10 ಗ್ರಾಂಗೆ 201 ರೂಪಾಯಿ ಕಡಿಮೆಯಾಗಿದೆ.
ಇನ್ನು 916 ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 184 ರೂಪಾಯಿ ಇಳಿಕೆಯೊಂದಿಗೆ 46,076 ರೂಪಾಯಿ ಆಗಿದೆ. ಚಿನ್ನದ ಬೆಲೆ ಕಳೆದ 7 ತಿಂಗಳುಗಳಲ್ಲೇ ಅತ್ಯಂತ ಕನಿಷ್ಟ ಮಟ್ಟಕ್ಕೆ ಬಂದಿತ್ತು. ವಿಶೇಷ ಅಂದ್ರೆ ಹಬ್ಬ ಹರಿದಿನಗಳ ಸಮಯದಲ್ಲೇ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರುತ್ತಿದೆ.