
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,949 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,10,26,829ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 542 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,12,531 ಕ್ಕೆ ಏರಿಕೆಯಾಗಿದೆ.
ಇನ್ನು ದೇಶದಲ್ಲಿ 4,30,422 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 24 ಗಂಟೆಯಲ್ಲಿ 40,026 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 3,01,83,876 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ನಿನ್ನೆ 19,55,910 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಕಳೆದ 24ಗಂಟೆಯಲ್ಲಿ 38,78,078 ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ. ದೇಶದಲ್ಲಿ ಈವರೆಗೆ 39,53,43,767 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ: ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗತೊಡಗಿದ್ದು, ಈಗ ಮೂರನೇ ಅಲೆ ಭೀತಿ ಎದುರಾಗಿದೆ. ಇದನ್ನು ತಹಬದಿಗೆ ತರಬೇಕೆಂದರೆ ಅದಷ್ಟು ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ ನೀಡುವಂತಾಗಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದರ ಮಧ್ಯೆ ಲಸಿಕೆ ಕೊರತೆ ಎದುರಾದ ಹಿನ್ನಲೆಯಲ್ಲಿ ಲಸಿಕೆ ನೀಡುವಿಕೆ ನಿಧಾನವಾಗಿ ಸಾಗುವಂತಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 14,505 ಕೋಟಿ ರೂಪಾಯಿ ಮೌಲ್ಯದ 66 ಕೋಟಿ ಕೋವಿಡ್ ಲಸಿಕೆಗಳಿಗೆ ಆರ್ಡರ್ ಮಾಡಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಪೂರೈಕೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಮಹಾರಾಷ್ಟ್ರ ಪ್ರವೇಶಕ್ಕೆ ಆರ್ ಟಿ – ಪಿಸಿಆರ್ ಟೆಸ್ಟ್ ಕುರಿತು ಸರ್ಕಾರದಿಂದ ಮಹತ್ವದ ಕ್ರಮ: ಮಹಾರಾಷ್ಟ್ರದಲ್ಲಿ ಅಬ್ಬರಿಸಿದ್ದ ಕೊರೊನಾ ಈಗ ಇಳಿಕೆಯತ್ತ ಸಾಗಿದೆ. ಇದರ ಮಧ್ಯೆ ಮಹಾರಾಷ್ಟ್ರ ಪ್ರವೇಶಿಸುವವರಿಗೆ ಆರ್ ಟಿ – ಪಿಸಿಆರ್ ಟೆಸ್ಟ್ ಕಡ್ಡಾಯ ಎಂದು ಸರ್ಕಾರ ಈ ಹಿಂದೆ ಹೇಳಿತ್ತು.
ಇದೀಗ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಆರ್ ಟಿ – ಪಿಸಿಆರ್ ಟೆಸ್ಟ್ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. яндекс
ಕೊರೊನಾ ಸಾಮಾನ್ಯ ಗುಣಲಕ್ಷಣಗಳ ಮಾಹಿತಿ ಪ್ರಕಟ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಕೊರೊನಾದ ಸಾಮಾನ್ಯ ಲಕ್ಷಣಗಳು ಕುರಿತು ಮತ್ತೊಮ್ಮೆ ಮಾಹಿತಿ ಪ್ರಕಟಿಸಲಾಗಿದೆ. ಜ್ವರ, ಒಣ ಕೆಮ್ಮು, ನಿಶ್ಯಕ್ತಿ, ರುಚಿ ಮತ್ತು ವಾಸನೆ ಕಳೆದುಕೊಳ್ಳುವಿಕೆ, ಚರ್ಮದ ತುರಿಕೆ, ಕಣ್ಣು ಉರಿ, ಊತ, ತಲೆನೋವು ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

