ಶುಕ್ರವಾರ ನಡೆದ 46ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ವರ್ಷದಲ್ಲಿ ಜಿ.ಎಸ್.ಟಿ. ಏರಿಕೆಯ ಪರಿಣಾಮದಿಂದಾಗಿ ಉಡುಪುಗಳ ದರ ಏರಿಕೆಯಾಗಲಿದೆ ಎಂದು ಬೇಸರದಲ್ಲಿದ್ದ ಗ್ರಾಹಕರಿಗೆ ಸಂತೋಷದ ಸುದ್ದಿ ನೀಡಿದ್ದಾರೆ. ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಉಡುಪುಗಳ ಮೇಲಿನ ಜಿ.ಎಸ್.ಟಿ. ಏರಿಕೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಡಿಸೆಂಬರ್ 31, 2021 ರಂದು ನಡೆದ ಸಭೆಯಲ್ಲಿ ಸಮಿತಿಯು, ಜವಳಿ ಮೇಲಿನ ಜಿ.ಎಸ್.ಟಿ. ದರ ಶೇ 5ರಿಂದ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಮುಂದೂಡುವುದಕ್ಕೆ ಸರ್ವಾನುಮತದಿಂದ ಸಮ್ಮತಿ ನೀಡಿದೆ. ಈ ಬಗ್ಗೆ ಮುಂದಿನ ಜಿ.ಎಸ್.ಟಿ. ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲು ಕೂಡಾ ನಿರ್ಧಾರ ಮಾಡಲಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಸಭೆಯಲ್ಲಿ ಜಿ.ಎಸ್.ಟಿ. ಕೌನ್ಸಿಲ್ ಜವಳಿ ಮೇಲಿನ ಜಿ.ಎಸ್.ಟಿ. ದರವನ್ನು ಏರಿಕೆ ಮಾಡುವುದನ್ನು ಸದ್ಯಕ್ಕೆ ಮುಂದೂಡಿಕೆ ಮಾಡಿದೆ, ಪಾದರಕ್ಷೆ ಮೇಲಿನ ದರದ ಬಗ್ಗೆ ಇನ್ನು ಯಾವುದೇ ನಿರ್ಧಾರವಾಗಿಲ್ಲ, ಫೆಬ್ರವರಿ 2022ರಲ್ಲಿ ನಡೆಯಲಿರುವ ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಜನವರಿ ಒಂದರಿಂದ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿ.ಎಸ್.ಟಿ.ಯು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ಈಗ ಉಡುಪಿನ ಮೇಲಿನ ಜಿ.ಎಸ್.ಟಿ. ಏರಿಕೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಹಲವು ರಾಜ್ಯ ಸರ್ಕಾರಗಳು ಜಿ.ಎಸ್.ಟಿ. ವಿಧಿಸುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.