ಬೆಳಗ್ಗೆ ನಾವು ಏನು ಸೇವಿಸ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು. ಬೆಳಿಗ್ಗೆ ಹಣ್ಣಿನ ಸೇವನೆ ಉತ್ತಮ ಎನ್ನುವುದು ಅನೇಕರಿಗೆ ಗೊತ್ತು. ಆದ್ರೆ ಬರೀ ಹಣ್ಣು ತಿನ್ನಲು ಮನಸ್ಸಾಗುವುದಿಲ್ಲ. ಹಣ್ಣಿನ ಜೊತೆ ಮತ್ತೆ ಕೆಲವೊಂದು ಆಹಾರ ಸೇವನೆ ಮಾಡುವುದರಿಂದ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ದೇಹದ ತೂಕವನ್ನು ಕೂಡ ನಿಯಂತ್ರಿಸಬಹುದು.
ಸೇಬುಹಣ್ಣಿನ ಜೊತೆ ಹಾಲು ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ನೆರವಾಗುವುದಲ್ಲದೆ, ರುಚಿ ಕೂಡ ಹೌದು. ಬೆಳಗಿನ ಉಪಹಾರಕ್ಕೆ ಬೇಯಿಸಿದ ಮೊಟ್ಟೆಯನ್ನು ಕೂಡ ಸೇವಿಸಬಹುದು. ಮೊಟ್ಟೆ ಜೊತೆ ಬ್ರೆಡ್ ತಿನ್ನುವುದರಿಂದ ಹೊಟ್ಟೆ ತುಂಬುವುದಲ್ಲದೆ ತೂಕ ಏರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.
ಓಟ್ಸ್ ತಿನ್ನುವುದು ಬೆಸ್ಟ್. ಇದು ಆರೋಗ್ಯ, ರುಚಿ ಹಾಗೂ ತೂಕ ಇಳಿಸುವಿಕೆ ಎಲ್ಲದಕ್ಕೂ ನೆರವಾಗುತ್ತದೆ. ಉಪಹಾರದಲ್ಲಿ ಮೊಸರು ಬಳಸುವುದು ಬಹಳ ಒಳ್ಳೆಯದು. ಕಡಲೆಕಾಯಿ ಬೆಣ್ಣೆ ಕೂಡ ತೂಕ ಇಳಿಸಲು ಸಹಕಾರಿ.