ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಆದಿಯಲ್ಲಿ ಮೊದಲು ಪೂಜಿಸಲ್ಪಡುವ, ಮೋದಕ ಪ್ರಿಯ ಗಣೇಶನನ್ನು ಪ್ರಾರ್ಥನೆ ಮಾಡಿದ್ರೆ ಎಲ್ಲ ಕಷ್ಟಗಳು ಬಗೆ ಹರಿಯುತ್ತವೆ ಎಂದು ನಂಬಲಾಗಿದೆ. ಯಾವುದೇ ಕೆಲಸ ಶುರು ಮಾಡುವ ಮುನ್ನ ಗಣಪತಿಯನ್ನು ನೆನೆಯಲಾಗುತ್ತದೆ. ಸಿದ್ಧಿ ವಿನಾಯಕ ಬುದ್ಧಿವಂತ ದೇವರು ಎಂದೇ ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧದ ಸ್ಥಾನವನ್ನು ಬಲಪಡಿಸಲು ಗಣೇಶನ ಆರಾಧನೆ ಮಾಡಬೇಕು ಎನ್ನಲಾಗಿದೆ. ಬುಧವಾರ ಕೆಲ ಉಪಾಯಗಳನ್ನು ಮಾಡುವ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಬಹುದು.
ಬುಧವಾರದಂದು ಗಣೇಶನ ಮುಂದೆ ಅಥರ್ವಶೀರ್ಷ ಪಠಿಸಬೇಕು. ಮೋದಕ ಅಥವಾ ಲಡ್ಡನ್ನು ಗಣಪತಿಗೆ ನೀಡಬೇಕು. ಗಣೇಶನ ಪೂಜೆ ನಂತ್ರ ತಾಯಿ ಲಕ್ಷ್ಮಿ ಆರಾಧನೆ ಮಾಡ್ಬೇಕು.
ಸಾಲದಿಂದ ಮುಕ್ತಿ ಬೇಕು ಎನ್ನುವವರು ಬುಧವಾರದಂದು ಹೆಸರು ಕಾಳನ್ನು ತಂದು ಬೇಯಿಸಬೇಕು. ಅದಕ್ಕೆ ತುಪ್ಪ, ಸಕ್ಕರೆ ಹಾಕಿ ಹಸುವಿಗೆ ತಿನ್ನಿಸಬೇಕು. ಹೀಗೆ 5 ರಿಂದ 7 ಬುಧವಾರ ಮಾಡಿದ್ರೆ ಸಾಲದಿಂದ ನಿಮಗೆ ಬಿಡುಗಡೆ ಸಿಗುತ್ತದೆ.
ಬುಧವಾರ ಗಣೇಶನಿಗೆ 21 ಅಥವಾ 42 ಜಾಯಿಕಾಯಿಯನ್ನು ಅರ್ಪಿಸಬೇಕು. ಇದ್ರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.
ಗಣಪತಿಯ ದೇವಸ್ಥಾನಕ್ಕೆ ಹೋಗಿ ದೂರ್ವೆ ಮತ್ತು ಲಾಡನ್ನು ಅರ್ಪಿಸಬೇಕು. ಹಾಗೆ ಬುಧವಾರ ಲಕ್ಷ್ಮಿ ದೇವಿಗೆ ಕಮಲದ ಹೂವನ್ನು ಅರ್ಪಿಸಬೇಕು. 11ರಿಂದ 21 ಬುಧವಾರಗಳ ಕಾಲ ನೀವು ಭಕ್ತಿಯಿಂದ ಮಾಡಿದ್ರೆ ಫಲ ಸಿಗುತ್ತದೆ.
ಬುಧವಾರ ಮಂಗಳಮುಖಿಯರಿಗೆ ಹಣವನ್ನು ದಾನ ಮಾಡಬೇಕು. ಅವರಿಂದ ಆಶೀರ್ವಾದವಾಗಿ ಹಣ ಪಡೆದು ಅದನ್ನು ದೇವರ ಮನೆಯಲ್ಲಿ ಇಡಬೇಕು. ಅದನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ಇಡಬೇಕು. ಹೀಗೆ ಮಾಡಿದ್ರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.