
ಡಯಟ್ ಪ್ಲಾನ್ ಮಾಡುವವರೆಲ್ಲಾ ರಾತ್ರಿ ಊಟಕ್ಕೆ ಅನ್ನ ಒಳ್ಳೆಯದೋ ಚಪಾತಿ ಒಳ್ಳೆಯದೋ ಎಂಬ ಗೊಂದಲದಲ್ಲಿರುತ್ತಾರೆ. ಇದರ ಪರಿಹಾರಕ್ಕೆ ಇಲ್ಲಿದೆ ಸೂತ್ರ.
ಎಲ್ಲಕ್ಕೂ ಮುಖ್ಯ ತೃಪ್ತಿ ನೀಡುವ ಆಹಾರ ಸೇವಿಸುವುದು. ಡಯಟ್ ಮಾಡಿದರೂ ಮನಸ್ಸಿಲ್ಲದ ಮನಸ್ಸಿನಿಂದ ಸೇವಿಸಿದರೆ ಸಮಸ್ಯೆಯಾಗುವುದೇ ಹೆಚ್ಚು.
ತೂಕವನ್ನು ಕಡಿಮೆ ಮಾಡಲೆಂದು ಜನ ರಾತ್ರಿ ಅನ್ನ ಹಾಗೂ ಚಪಾತಿ ಎರಡನ್ನೂ ಬಿಟ್ಟು ಬಿಡುತ್ತಾರೆ. ಇದು ಮೊದಲನೆಯ ತಪ್ಪು. ಆಹಾರವಾಗಿ ರಾತ್ರಿ ಏನನ್ನಾದರೂ ತಿನ್ನುವುದು ಬಹಳ ಮುಖ್ಯ.
ರೊಟ್ಟಿ/ಚಪಾತಿ ತಿನ್ನುವುದರಿಂದ ದಿನವಿಡೀ ಹೊಟ್ಟೆ ತುಂಬಿದ ಭಾವನೆಯಿದ್ದರೆ ಅಕ್ಕಿಯಲ್ಲಿರುವ ಪಿಷ್ಟದಿಂದ ಅದು ಬೇಗ ಜೀರ್ಣವಾಗುತ್ತದೆ. ಅಕ್ಕಿಯಲ್ಲಿ ಸೋಡಿಯಂ ಕಡಿಮೆ ಇದ್ದು ನಿಮ್ಮ ಡಯಟ್ ಪ್ಲಾನ್ ನಲ್ಲಿ ಸೋಡಿಯಂ ಕಡಿಮೆ ಮಾಡಲು ಬಯಸುವವರಾದರೆ ರೊಟ್ಟಿ ಅಥವಾ ಚಪಾತಿ ಸೇವನೆ ನಿಲ್ಲಿಸಬಹುದು.
ಅನ್ನ, ಚಪಾತಿಗಿಂತ ಕಡಿಮೆ ಫೈಬರ್, ಪ್ರೊಟೀನ್ ಮತ್ತು ಕೊಬ್ಬನ್ನು ಹೊಂದಿದೆ. ರಾತ್ರಿಯಿಂದ ಬೆಳಗಿನ ತನಕ ಆಹಾರ ಸೇವಿಸುವ ಸಮಯದಲ್ಲಿ ಹೆಚ್ಚಿನ ಅಂತರವಿದ್ದು, ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು. ಸಜ್ಜೆ ರೊಟ್ಟಿಯಲ್ಲಿ ಪ್ರೊಟೀನ್ ಹೆಚ್ಚಿರುವುದರಿಂದ ಡಿನ್ನರ್ ಗೆ ಸೇವಿಸಬಹುದು.